ಶಿವಾಜಿ ಇರಲಿಲ್ಲ ಅಂದರೇ ಹಿಂದುಗಳು ಇರುತ್ತಿರಲಿಲ್ಲ

Eshwarappa
Published on

ಬಾಗಲಕೋಟೆ: ಛತ್ರಪತಿ ಶಿವಾಜಿ ಇರಲಿಲ್ಲ ಅಂದರೇ ನಾವು ನೀವು ಈ ದೇಶದಲ್ಲಿ ಹಿಂದುಗಳಾಗಿ ಇರೋಕೆ ಆಗುತ್ತಿರಲಿಲ್ಲ. ಎಲ್ಲಿ ಕಟ್ ಆಗಿ ಹೋಗ್ತಿತ್ತು. ಈ ಬಗ್ಗೆ ಯಾರಾದರು ನನ್ನ ಮೇಲೆ ಸಾವಿರ ಕೇಸ ಹಾಕಲಿ. ಎಲ್ಲ ಪೀಸ್ ಪೀಸ ಮಾಡುತ್ತಿದ್ದರು. ಛತ್ರಪತಿ ಶಿವಾಜಿ ಮಹಾರಾಜ ದೇಶದಲ್ಲಿ ಇದ್ದಿದ್ದರಿಂದ ನಾವೆಲ್ಲ ಹಿಂದೂಗಳು ಉಳಿದಿದ್ದೇವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಾಜಿಗೆ ಅಪಮಾನ ಮಾಡೋವದರಿಂದ ಮುಸ್ಲಿಂ ವೋಡ್ ಬರುತ್ತೆ ಎಂಬ ಭ್ರಮೆಯಲ್ಲಿದ್ದಾರೆ. ಈ ಕಾಂಗ್ರೆಸ್‌ನವರು ನೇರವಾಗಿ ದೇಶದ್ರೋಹಿಗಳಿಗೆ ಬೆಂಬಲ ಕೊಡುತ್ತಿದ್ದಾರೆ. ಯಾರು ರಾಷ್ಟ್ರ ದ್ರೋಹಿ ಅಂತವರಿಗೆ ಬೆಂಬಲಕೊಡ್ತಿರೋ ಪಕ್ಷ ಅಂದ್ರೆ ಅದು ಕಾಂಗ್ರೆಸ್ ಅಂತ ಆರೋಪಿಸಿದರು.

ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಾಹಾರಾಜರ ಮೂರ್ತಿ ಯಾಕೆ ತೆಗೆದರು. ಡಿಸಿ, ಎಸ್‌ಪಿ ಖಾಲಿ ಇದ್ರಾ…? ಯಾವ ಕಾಂಗ್ರೆಸನವರು ಬ್ಲಾಕಮೇಲï ಮಾಡಿದ್ದು. ತನಿಖೆ ಆಗಲಿ, ಗೊತ್ತಾಗುತ್ತೆ. ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ತೆರವಿಗೆ ಎಸ್.ಪಿ, ಡಿಸಿಗೆ ಧಮಕಿ ಹಾಕಿದ ಮಂತ್ರಿ ಯಾರು…? ಅಂತಾ ತನಿಖೆ ಮಾಡಿ, ರಾಜಿನಾಮೆ ತಗೊಳ್ಳಿ. ಇದು ಬಾಗಲಕೋಟೆ ಜಿಲ್ಲೆಗೆ ಮಾಡಿದ ಅವಮಾನ ಅಲ್ಲ. ಇಡೀ ಹಿಂದೂ ಸಮಾಜಕ್ಕೆ ಮಾಡಿದ ಅವಮಾನ. ಅನುಭವಿಸ್ತಾರೆ, ಅನುಭವಿಸಲಿ ಎಂದು ಗುಡಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net