ಶಿರಸಿಯಲ್ಲಿ ಮೂವರು ಪಿಎಫ್ ಐ ಕಾರ್ಯಕರ್ತರ ಬಂಧನ

Screenshot_20220927-2331192.png
Published on

ವಿಜಯವಾಣಿ ಸುದ್ದಿಜಾಲ ಶಿರಸಿ: ನಗರದ ಮೂವರು ಪಿಎಫ್ ಐ ಕಾರ್ಯಕರ್ತರನ್ನು ಸ್ಥಳೀಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆ ಕೇಂದ್ರದ ಇನ್ವೆಸ್ಟಿಗೇಷನ್ ಬ್ಯೂರೋ (ಐಬಿ) ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ‌ ಪೊಲೀಸರ ಮೂವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಐಬಿ ಬಂಧಿಸಿದ್ದ ಅಬ್ದುಲ್ ಅಜೀಜ್ ಶುಕುರ್ ಹೊನ್ನಾವರನ ಸಹೋದರ ಅಬ್ದುಲ್ ರಜಾಕ್ ಅಬ್ದುಲ್ ಶುಕೂರ್ (28), ಇಮಾಮ್ ಅಬ್ದುಲ್ ಸಮ್ಮದ್ (32), ತಾವುಲ್ಲಾ ಅಬ್ದುಲ್ ಘನಿ ತಡಸ (32) ಬಂಧಿತರು.
ಅಪರಾಧ ಕೃತ್ಯಗಳನ್ನು ನಡೆಸಲು ಯೋಜಿಸಿ ಜನರನ್ನು ಸೇರಿಸುತ್ತಿದ್ದ ಆರೋಪವಿದ್ದು, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ, ಶಾಂತಿಗೆ ಭಂಗ ತರುವಂಥ ಕೃತ್ಯಗಳಲ್ಲಿ ತೊಡಗುವ ಸಾಧ್ಯತೆ ಇರುವುದರಿಂದ ಪೊಲೀಸರು ಅರೋಪಿಗಳನ್ನು ಪಶಕ್ಕೆ ಪಡೆದಿದ್ದಾರೆ.
ಅಲ್ಲದ, ಈ ಆರೋಪಿಗಳು ರಾಷ್ಟ್ರೀಯ ಹಿತಾಸಕ್ತಿಯುಳ್ಳ ಜನರನ್ನು ಕೆರಳಿಸುವ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಸಾಧ್ಯತೆಯೂ ಕಂಡುಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗಿದೆ ಡಿವೈಎಸ್ ಪಿ ರವಿ ನಾಯಕನ ತಿಳಿಸಿದ್ದಾರೆ. ಸಿಪಿಐ ರಾಮಚಂದ್ರ ನಾಯಕ ಮಾರ್ಗದರ್ಶನದಲ್ಲಿ ಪಿಎಸ್ಐ ಪ್ರತಾಪ, ಭೀಮಾಶಂಕರ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net