ಶಿರಸಿಯಲ್ಲಿ ಎಸ್ ಡಿಪಿಐ ಮುಖಂಡನ ಬಂಧನ

IMG-20220922-WA0010.jpg
Published on

ಶಿರಸಿ: ತಾಲೂಕಿನ ಬನವಾಸಿ ರಸ್ತೆಯಲ್ಲಿನ ಟಿಪ್ಪು ನಗರ ಎಂದು ಕರೆಯಲ್ಪಡುವ ಭಾಗದಲ್ಲಿ ರಾಷ್ಟ್ರೀಯ ತನಿಖಾ ದಳದವರು ಸ್ಥಳೀಯ ಪೊಲೀಸರೊಂದಿಗೆ ದಾಳಿ ನಡೆಸಿ, ಒಬ್ಬ ಎಸ್ಡಿಪಿಐ ಮುಖಂಡನನ್ನು ಬಂಧಿಸಿದ್ದಾರೆ.
ಎಸ್ಡಿಪಿಐ ಮುಖಂಡ ಅಜೀಜ್ ಅಬ್ದುಲ್ ಶುಕುರ್ ಹೊನ್ನಾವರ್ (45) ಎಂಬತಾನನ್ನು ಬಂಧಿಸಲಾಗಿದೆ. ಬೆಳಗ್ಗೆ 3.30 ರಿಂದಲೇ ಅಬ್ದುಲ್ ಮನೆಯ ಮೇಲೆ ದಾಳಿ ನಡೆಸಲು ಪೊಲೀಸರ ದಂಡೇ ನೆರೆದಿತ್ತು. 6 ಗಂಟೆಯ ವೇಳೆಗೆ ಅಬ್ದುಲ್ ಮನೆಗೆ ಪೊಲೀಸರು ಹೊಕ್ಕಿದ್ದು, ಒಂದು ಲ್ಯಾಪ್ ಟಾಪ್, 2 ಮೊಬೈಲ್, ಪುಸ್ತಕ ಹಾಗೂ ಒಂದು ಸಿಡಿಯನ್ನು ಜಪ್ತು ಮಾಡಲಾಗಿದೆ.‌
ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ರವಿ ಡಿ ನಾಯ್ಕ, ಸಿಪಿಐ ರಾಮಚಂದ್ರ ನಾಯಕ ಹಾಗೂ ಶಿರಸಿ ಉಪವಿಭಾಗದ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net