ಶಿರಸಿ ಜಿಲ್ಲೆ, ಬನವಾಸಿ ತಾಲೂಕು ರಚನೆಗೆ ಆಗ್ರಹ

8SIRSI2
Published on

ಶಿರಸಿ: ಶಿರಸಿ ಪ್ರತ್ಯೇಕ ಜಿಲ್ಲೆ ಹಾಗೂ ಬನವಾಸಿ ನೂತನ ತಾಲೂಕು ಎಂದು ಸರ್ಕಾರ ಘೊಷಣೆ ಮಾಡುವವರೆಗೂ ಶಿರಸಿ ಜಿಲ್ಲಾ ಹೋರಾಟ ಸಮಿತಿ ವಿವಿಧ ಹಂತದಲ್ಲಿ ಹೋರಾಟ ನಡೆಸಲಿದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು.

ತಾಲೂಕಿನ ಬನವಾಸಿಯ ಪಂಪ ವೃತ್ತದಲ್ಲಿ ಬುಧವಾರ ಶಿರಸಿ ಜಿಲ್ಲೆ, ಬನವಾಸಿ ತಾಲೂಕು ಆಗಬೇಕು ಎಂದು ಆಗ್ರಹಿಸಿ ಪತ್ರ ಚಳವಳಿ ನಡೆಸಿ ಮಾತನಾಡಿದ ಅವರು, ಅಕ್ಟೋಬರ್ 14ರಂದು ಪಂಜಿನ ಮೆರವಣಿಗೆ ನಡೆಯಲಿದೆ. ನವೆಂಬರ್ ಒಂದರ ಒಳಗಾಗಿ ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೆ ನವೆಂಬರ್ 1 ರಾಜ್ಯೋತ್ಸವ ಬದಲು ಕರಾಳ ದಿನ ಆಚರಣೆ ಮಾಡುತ್ತೇವೆ ಎಂದರು.

ಬನವಾಸಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ ಕಾನಳ್ಳಿ ಮಾತನಾಡಿ, ಶಿರಸಿ ಜಿಲ್ಲೆ-ಬನವಾಸಿ ತಾಲೂಕು ಆಗುವ ಎಲ್ಲ ಅರ್ಹತೆ ಇದ್ದರೂ ಮಾಡುತ್ತಿಲ್ಲ. ಜನಪ್ರತಿನಿಧಿಗಳ ನಿರಾಸಕ್ತಿ ಕಾರಣ ಎಂದರು.

ಸಮಿತಿಯ ಗೌರವಾಧ್ಯಕ್ಷ ಸಿ.ಎಫ್. ನಾಯ್ಕ ಮಾತನಾಡಿ, ಜಿಲ್ಲಾ ಹೋರಾಟ ಸಮಿತಿ ಕಾರ್ಯದರ್ಶಿ ಎಂ.ಎಂ.ಭಟ್ಟ, ಡಿಎಸ್​ಎಸ್ ಜಿಲ್ಲಾ ಸಂಚಾಲಕ ಬಿ. ಶಿವಾಜಿ, ವೇ.ಮೂ. ನರಸಿಂಹ ದೀಕ್ಷಿತ್, ಸುಧಾಕರ ನಾಯ್ಕ, ಚಂದ್ರಪ್ಪ ನಾಯ್ಕ, ಹಸೀನಾ ಜೈರುದ್ದೀನ್, ಸಾಯಿರಾಮ ಕಾನಳ್ಳಿ, ವಿಶ್ವನಾಥ ಚೌಧರಿ, ವಿಶ್ವನಾಥ ಒಡೆಯರ, ಸಿದ್ಧೇಶ್ವರ ಲಕ್ಕೊಳ್ಳಿ, ರಘು ಕಾನಡೆ, ನಂದಕುಮಾರ ಜೋಗಳೇಕರ, ವಿನಾಯಕ ಆಚಾರಿ, ಅರವಿಂದ ಬಳಗಾರ, ರಾಜು ಆರೇರ, ವಿಶ್ವನಾಥ ಹಾದಿಮನೆ, ಸುರೇಶ ಆರೇರ, ಸಿ.ಬಿ. ಗೌಡ ಅಂಡಗಿ, ಅಶೋಕ ಕೆ. ನಾಯ್ಕ, ಮಧುರವಳ್ಳಿ, ಅಶೋಕ ಪೊನ್ನಪ್ಪ, ಗುತ್ಯಪ್ಪ ಕಪಗೇರಿ, ಪ್ರಶಾಂತ ಭಂಡೇರ, ಶ್ರೀಕಾಂತ ಶೆಟ್ಟಿ, ಜಯಶೀಲ ಗೌಡ ಭಾಶಿ, ಸಿದ್ಧಲಿಂಗೇಶ ಕಬ್ಬೂರ ಇತರರು ಇದ್ದರು.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net