ಶಿಕ್ಷಣವಂತರಾಗಿ ಉನ್ನತ ಹುದ್ದೆ ಅಲಂಕರಿಸಿ

bkt-18-3
ಬಾಗಲಕೋಟೆ ನಗರದ ಕಲಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಮುಸ್ಲಿಂ ನೌಕರರ ಬೃಹತ್ ಸಮ್ಮೇಳನ ವಿಧಾನಸಭಾಧ್ಯಕ್ಷ ಯು.ಟಿ.ಖಾದರ ಉದ್ಘಾಟಿಸಿದರು.
Published on

ಬಾಗಲಕೋಟೆ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ತನ್ಮೂಲಕ ಉನ್ನತ ಹುದ್ದೆ ಅಲಂಕರಿಸಿ ದೇಶ, ಸಮಾಜ, ಬಡವರ ಸೇವೆ ಮಾಡಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ ಹೇಳಿದರು.

ನವನಗರದ ಕಲಾಭವನದಲ್ಲಿ ಜಿಲ್ಲಾ ಸರ್ಕಾರಿ, ಅರೆ ಸರ್ಕಾರಿ ನೌಕರರ ಸಂಘ, ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಮುಸ್ಲಿಂ ನೌಕರರ ಬೃಹತ್ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಸೇವೆ ಮೂಲಕ ದೇವರನ್ನ ಕಾಣಬೇಕು, ಅದರಲ್ಲಿ ತೃಪ್ತಿ ನೆಮ್ಮದಿ ಅಡಗಿದೆ. ಟೀಕೆ, ಟಿಪ್ಪಣಿಗಳು ಸಹಜ. ಅದಕ್ಕೆ ಬಹಳಷ್ಟು ಮಹತ್ವ ಕೊಡುವ ಅವಶ್ಯಕತೆ ಇಲ್ಲ. ಮನಸ್ಸಿನಲ್ಲಿರುವ ಕೆಟ್ಟದನ್ನು ಕಸ ಬುಟ್ಟಿಗೆ ಎಸೆದು ಒಳ್ಳೆದನ್ನು ಮುಂದುವರೆಸಬೇಕು. ಪ್ರಮಾಣಿಕವಾಗಿ ಸೇವೆ ಸಲ್ಲಿಸಬೇಕು. ಲಕ್ಷಾಂತರ ಜನ ಸರ್ಕಾರಿ ನೌಕರಿಗಾಗಿ ಕಾಯುತ್ತಾರೆ, ಆದರೇ ಬೆರಳಣಿಕೆ ಜನರಿಗೆ ಮಾತ್ರ ದೊರೆಯುತ್ತದೆ. ಅದನ್ನು ಕಾಪಿಟ್ಟುಕೊಳ್ಳುವ ಮೂಲಕ ಜನ ಸೇವೆ ಮಾಡಬೇಕು ಎಂದರು.

ಸರ್ಕಾರಿ ನೌಕರಿ ಎಲ್ಲರಿಗೂ ಸುಲಭವಾಗಿ ಸಿಗುವಂಥದಲ್ಲ. ನೀವು ಸಾಕಷ್ಟು ಪ್ರಯತ್ನ ಪಟ್ಟು ಹುದ್ದೆಯನ್ನು ಪಡೆದಿರುತ್ತೀರಿ. ಆದರೆ ಹುದ್ದೆ ಸಿಕ್ಕ ನಂತರ ನಾವು ಆದರ್ಶಗಳನ್ನು ಕಳೆದುಕೊಳ್ಳಬಾರದು. ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದಾಗ ಅದು ನಾವು ಪ್ರತಿನಿಽಸುವ ಸಮಾಜಕ್ಕೂ ಗೌರವವನ್ನು ತಂದುಕೊಡುತ್ತದೆ. ಆ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕು ಎಂದು ಹೇಳಿದರು.

ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು, ನಾವು ಪೊಲೀಸ್, ಇಂಜನಿಯರ್, ಶಿಕ್ಷಕ, ವೃದ್ಯರಾಗಿದ್ದರೆ ನಾವಿದ್ದ ಕ್ಷೇತ್ರವನ್ನಷ್ಟೇ ಅಭಿವೃದ್ಧಿಪಡಿಸಬಹುದು. ಆದರೆ ಒಬ್ಬ ರಾಜಕಾರಣಿಯಾಗಿ ಯಶಸ್ಸು ಗಿಟ್ಟಿಸಿಕೊಂಡರೆ ಸರ್ವ ಕ್ಷೇತ್ರಗಳನ್ನೂ ನಾವು ಅಭಿವೃದ್ಧಿಪಡಿಸಬಹುದು. ಹೀಗಾಗಿ ರಾಜಕೀಯಕ್ಕೆ ವಿದ್ಯಾವಂತರು ದಾಪುಗಾಲು ಇಡಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರು ಮಾತನಾಡಿ, ಕೆಲಸದಲ್ಲಿ ಪ್ರಾಮಾಣಿಕತೆ ಇರಬೇಕು. ಸರ್ಕಾರಿ ನೌಕರಿ ಮಾಡುವುದು ಒಂದು ಸುಯೋಗವಿದ್ದಂತೆ. ನಮಗೆ ಅವಕಾಶ ಸಿಕ್ಕಾಗ ಇತರರಿಗೂ ಒಳಿತಾಗುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಮಾಜಿ ಸಚಿವ ಎಸ್.ಆರ್.ಪಾಟೀಲ, ಶಾಸಕ ಜೆ.ಟಿ.ಪಾಟೀಲ, ವಿಧಾನ ಪರಿಷತ್ ಸದಸ್ಯೆ ಬಿಲ್ಕೀಸ್ ಬಾನು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಕೆಪಿಸಿಸಿ ಉಪಾಧ್ಯಕ್ಷ ಎಂ.ಬಿ.ಸೌದಾಗರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ ಮೋಹಸಿನ್, ಜಿಲ್ಲಾಽಕಾರಿ ಕೆ.ಎಂ.ಜಾನಕಿ, ಜಿಪಂ ಸಿಇಒ ಶಶಿಧರ ಕುರೇರ, ಎಸ್ಪಿ ಅಮರನಾಥ ರೆಡ್ಡಿ, ನಗರ ಯೋಜನಾ ಪ್ರಾಽಕಾರದ ಮಾಜಿ ಅಧ್ಯಕ್ಷ ಎ.ಎ.ದಂಡಿಯಾ, ಮುಖಂಡರಾದ ಜಬ್ಬಾರ ಕಲಬುರಗಿ, ತೌಫಿಕ ಪಾರ್ಥನಳ್ಳಿ, ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಹುನಗುಂದ ಕ್ಷೇತ್ರ ಶಿಕ್ಷಣಾಽಕಾರಿ ಜಾಸ್ಮೀನ್ ಕಿಲ್ಲೆದಾರ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಾಗೆನ್ನವರ, ಎಸ್‌ಸಿ, ಎಸ್‌ಟಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಲಕ್ಷ÷್ಮಣ ಯಂಕAಚಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net