ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ

bkt-3-2
ಬೀಳಗಿ ತಾಲೂಕಿನ ಕೋಲೂರ ಗ್ರಾಮದ ಸರ್ಕಾರಿ ಪ್ರೌಢಶಾಲೆ ನೂತನ ಕಟ್ಟಡ ಹಾಗೂ ಶಾಲಾ ಗೇಟ್ ಶಾಸಕ ಜೆ.ಟಿ.ಪಾಟೀಲ ಉದ್ಘಾಟಿಸಿದರು. ಹಿರೇಮಠದ ಚಿಕ್ಕಯ್ಯ ಸ್ವಾಮೀಜಿ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ ವಂಟಗೋಡಿ, ಗ್ರಾ.ಪಂ ಅಧ್ಯಕ್ಷ ಬಸನಗೌಡ ಬಿರಾದಾರ, ಆರ್.ಎಸ್.ಆದಾಪುರ, ಡಿ.ಎಚ್.ಅಂಗಡಿ ಇತರರು ಇದ್ದರು.
Published on

ಬಾಗಲಕೋಟೆ: ಶಿಕ್ಷಣ ಎನ್ನುವುದು ಪ್ರತಿಯೊಬ್ಬರ ಬದುಕಿನ ಪ್ರಮುಖ ಭಾಗವಾಗಿದೆ. ಅಕ್ಷರ ಕಲಿಕೆ, ಅರಿವಿನಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.

ಬೀಳಗಿ ತಾಲೂಕಿನ ಕೋಲೂರ ಗ್ರಾಮದ ಸರ್ಕಾರಿ ಪ್ರೌಢಶಾಲೆ ನೂತನ ಕಟ್ಟಡ ಹಾಗೂ ಶಾಲಾ ಗೇಟ್ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಬಗ್ಗೆ ಮಕ್ಕಳು ಅಪಾರ ಕಾಳಜಿ ವಹಿಸಬೇಕು. ನಿರ್ಲಕ್ಷ್ಯ ಮಾಡಿದರಲ್ಲಿ ಬದುಕಿನಲ್ಲಿ ಕತ್ತಲೆ ಆವರಿಸುತ್ತದೆ. ಮಕ್ಕಳ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಲು ಶಿಕ್ಷಕರು ಪ್ರಯತ್ನಿಸಬೇಕು ಎಂದ ಅವರು, ಮುಂದಿನ ದಿನಗಳಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಶಾಲೆಗೆ ಸೌಕರ್ಯ ಹಾಗೂ ಹೈಟೆಕ್ ಶೌಚಗೃಹ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

ಹಿರೇಮಠದ ಚಿಕ್ಕಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ರಮೇಶ ವಂಟಗೋಡಿ, ಗ್ರಾ.ಪಂ ಅಧ್ಯಕ್ಷ ಬಸನಗೌಡ ಬಿರಾದಾರ, ಆರ್.ಎಸ್.ಆದಾಪುರ, ಡಿ.ಎಚ್.ಅಂಗಡಿ, ಗೋವಿಂದಪ್ಪ ಅಳ್ಳಿಕಟ್ಟಿ, ಬಿ.ಡಿ.ಕೋಟಿ, ಶಿವಪ್ಪ ತಿಪರಡ್ಡಿ, ಶ್ರೀಶೈಲ ಕುಂಬಾರ, ಷಣ್ಮುಕಪ್ಪ ದೊಡ್ಡಪೂಜಾರಿ, ರಮೇಶ ಸೋಮಣ್ಣವರ ಇತರರು ಇದ್ದರು. ಸೋಮಶೇಖರ ತಳೆವಾಡ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net