ಶಿಕ್ಷಣದಲ್ಲೂ ಕಾಂಗ್ರೆಸ್ ರಾಜಕೀಯ

SHASHIL G NAMOSHI
Published on

ಕಲಬುರಗಿ: ಮಕ್ಕಳಲ್ಲಿ ಉತ್ತಮ ಮೌಲ್ಯ ಬೆಳೆಸುವ ಶಿಕ್ಷಣ ವಿರೋಧಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಶಿಕ್ಷಣವನ್ನು ರಾಜಕೀಯಗೊಳಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಆರೋಪಿಸಿದರು.

ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ರದ್ದುಗೊಳಿಸಲು ಹೊರಟಿದೆ. ಶಿಕ್ಷಣ ತಜ್ಞರು ರೂಪಿಸಿರುವ ಈ ನೀತಿ ಮಕ್ಕಳ ಭವಿಷ್ಯ ರೂಪಿಸಲಿದೆ. ಆದರೆ ರಾಜ್ಯ ಸರ್ಕಾರಕ್ಕೆ ಇದು ಬೇಕಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಎನ್‌ಇಪಿ ಅಳವಡಿಕೆಯಿಂದಾಗುವ ಲಾಭದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪೀಪಲ್ಸï ಫೋರಂ ಫಾರ್ ಕರ್ನಾಟಕ ಸಂಘ ರಚಿಸಲಾಗಿದ್ದು, ಪ್ರತಿ ಜಿಲ್ಲೆಗಳಲ್ಲಿ ಜನಜಾಗೃತಿ ಮೂಡಿಸಲು ಶಿಕ್ಷಣ ತಜ್ಞರ ಸಭೆ ನಡೆಸಲಾಗುತ್ತಿದೆ. ಎನ್‌ಇಪಿ ಅಳವಡಿಕೆಯಿಂದ ಶಿಕ್ಷಣ ಕ್ಷೇತ್ರಕ್ಕೆ ಆಗುವ ಲಾಭ, ಅಂಗನವಾಡಿ, ಸರ್ಕಾರಿ ಶಾಲೆ ಮಕ್ಕಳು ಮತ್ತು ಶಿಕ್ಷಕರಿಗೆ ಆಗುವ ಪ್ರಯೋಜನ, ಗುಣಮಟ್ಟದ ಶಿಕ್ಷಣ ಕುರಿತು ತಿಳಿಸುವ ಜತೆಗೆ ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ವಿರೋಧಿಸಲಾಗುತ್ತಿದೆ ಎಂದು ವಿವರಿಸಿದರು.

ಕಾಲಕಾಲಕ್ಕೆ ಪಠ್ಯಪುಸ್ತಕಗಳನ್ನು ಪರಿಷ್ಕರಿಸುವ ವಾಡಿಕೆಯಿದೆ. ನಿಟ್ಟಿನಲ್ಲಿ ಪಠ್ಯಪುಸ್ತಕಗಳ ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ೨೦೧೦ರಲ್ಲಿ ಅಂದಿನ ರಾಜ್ಯ ಸರ್ಕಾರ ಶಿಕ್ಷಣ ತಜ್ಞರನ್ನೊಳಗೊಂಡ ತಂಡವು ಪಠ್ಯಕ್ರಮ ಪರಿಷ್ಕರಣೆ ಮತ್ತು ಪಠ್ಯಪುಸ್ತಕ ಸಮಿತಿ ರಚಿಸಿತ್ತು. ಶಿಕ್ಷಣ ತಜ್ಞ ಪ್ರೊ. ಜಿ.ಎಸ್.ಮೂಡಂಬಡಿತ್ತಾಯ ಅವರನ್ನು ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿತು. ಸುಮಾರು ೩೦೦೦ ಜನ ಸಂಪನ್ಮೂಲ ವ್ಯಕ್ತಿಗಳಿಗೆ ಪಠ್ಯಪುಸ್ತಕ ರಚನೆ ತರಬೇತಿ ನೀಡಲಾಗಿತ್ತು.

ಎಲ್ಲರ ಸಲಹೆ ಸೂಚನೆಗಳು ಪಡೆದು ಪಠ್ಯಪುಸ್ತಕ ರಚಿಸಲಾಗಿತ್ತು. ಹೀಗೆ ವೈಜ್ಱಆನಿಕವಾಗಿ ಸಿದ್ಧಪಡಿಸಿದ್ದ ಪಠ್ಯಪುಸ್ತಕ ೨೦೧೪ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೂ ಮುಂದುವರಿಸಲಾಗಿತ್ತು. ಆದರೆ ೨೦೧೭ರಲ್ಲಿ ರಾಜಕೀಯ ಉದ್ದೇಶದಿಂದ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ಪಠ್ಯಪರಿಸ್ಕರಣೆ ಸಮಿತಿ ರಚಿಸಿತ್ತು. ಆ ಸಮಿತಿ ಸಿದ್ಧಪಡಿಸಿದ ಪಠ್ಯಕ್ರಮವು ಮಕ್ಕಳಿಗೆ ಮಾರಕವಾಗಿತ್ತು ಎಂದು ಆರೋಪಿಸಿದರು.

ಶಾಸಕ ಡಾ.ಅವಿನಾಶ ಜಾಧವ್, ಅಣವೀರ ಪಾಟೀಲ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net