ಶಿಕ್ಷಣ ಸಂಪುಟ ಕೃತಿಗಳು ದಾಖಲೆ ಇದ್ದಂತೆ

bkt-11-5
ಬಾಗಲಕೋಟೆ ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಶನಿವಾರ ಬಾಗಲಕೊಟೆ ಜಿಲ್ಲೆ ; ಶಿಕ್ಷಣ ಸಂಪುಟ ೧ ಮತ್ತ ೨ ಕೃತಿಗಳ ಬಿಡುಗಡೆಗೊಂಡವು. ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಧಾರವಾಡದ ಖ್ಯಾತ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ, ಶಿಕ್ಷಣ ಇಲಾಖೆಯ ವಿಶ್ರಾಂತ ಉಪನಿರ್ದೇಶಕ ಸಿದ್ದರಾಮ ಮನಹಳ್ಳಿ, ಪ್ರೊ.ಎನ್.ಜಿ.ಕರೂರ, ಬಿ.ಎಚ್.ಆರ್.ಡಿ ನಿರ್ದೇಶಕ ಎಸ್.ಆರ್.ಮನಹಳ್ಳಿ, ಪ್ರೊ. ವಿ.ಆರ್.ಶಿರೋಳ ಇದ್ದರು.
Published on

ಬಾಗಲಕೋಟೆ: ಜಿಲ್ಲೆಯ ಹಿಂದಿನ ಶೈಕ್ಷಣಿಕ ಪ್ರಗತಿ ಕುರಿತು ಸಂಶೋಽತ ಕೃತಿಗಳಾದ ಬಾಗಲಕೋಟೆ ಶಿಕ್ಷಣ ಸಂಪುಟ ಕೃತಿಗಳು ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದ ದಾಖಲೆಯಾಗಲಿ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಶನಿವಾರ ಬಿ.ವಿ.ವಿ.ಸಂಘದ ವೈರಾಗ್ಯ ಮಲ್ಲಣಾರ್ಯ ಪ್ರಕಾಶನ- ಪ್ರಸಾರಾಂಗ, ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಾಗಲಕೊಟೆ ಜಿಲ್ಲೆ ; ಶಿಕ್ಷಣ ಸಂಪುಟ ೧ ಮತ್ತ ೨ ಕೃತಿಗಳ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಹಿಂದೆ ದೇವಸ್ಥಾನ, ಮಠಗಳಲ್ಲಿ ಸೇರಿದಂತೆ ಸುಮಾರು ೨೦೦ಕ್ಕೂ ಹೆಚ್ಚು ಶಾಲೆಗಳನ್ನು ಸಂಘದಿAದ ನಡೆಸುತ್ತಿದ್ದರು. ಆ ಶಾಲೆಯ ಶಿಕ್ಷಕರಿಗೆ ಇಲ್ಲಿ ತರಬೇತಿ ನೀಡುವುದಕ್ಕಾಗಿಯೇ ಇಲ್ಲಿ ಟಿಸಿಎಚ್ ಪ್ರಾರಂಭಿಸಿದರು ಎಂಬುವುದು ಇತಿಹಾಸದ ದಾಖಲೆಗಳಿಂದ ತಿಳಿದು ಬರುತ್ತದೆ. ಇಂತಹ ಅನೇಕ ಜಿಲ್ಲೆಯಲ್ಲಿನ ಐತಿಹಾಸಿಕ ಶೈಕ್ಷಣಿಕ ಪ್ರಗತಿ ಕುರಿತು ಜಿಲ್ಲೆಯ ಶಿಕ್ಷಣ ಸಂಪುಟಗಳು ಮಾಹಿತಿಯನ್ನು ಒದಗಿಸುತ್ತವೆ. ಅಲ್ಲದೆ ಈ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರಕ್ಕೆ ಈ ಸಂಪುಟಗಳು ದಾಖಲೆಯಾಗಲಿ ಉಳಿಯಲಿ ಎಂದರು.

ಧಾರವಾಡದ ಖ್ಯಾತ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ ಮಾತನಾಡಿ, ಬದಲಾಗುತ್ತಿರುವ ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಿಕ್ಷಕರು ಅತಿ ಹೆಚ್ಚು ಕ್ರಿಯಾಶೀಲರಾಗಿಬೇಕು. ವೃತ್ತಿ ನಿವೃತ್ತಿ ನಂತರವೂ ಚಿಂತಕರಾಗಿ ಮಾರ್ಗದರ್ಶನ ಮಾಡಬೇಕು. ಹಿಂದಿನ ಶೈಕ್ಷಣಿಕ ಬೆಳವಣಿಗೆಯನ್ನು ಮೆಲುಕು ಹಾಕಿದ ಅವರು ಆಯಾ ಕಾಲ ಘಟ್ಟದಲ್ಲಿ ಶಿಕ್ಚಣಕ್ಕೆ ನೀಡಿದ ಮಠ ಮಾನ್ಯಗಳ ಕೊಡುಗೆಯನ್ನು ವಿವರಿಸಿದರು.

ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ವಿಶ್ರಾಂತ ಉಪನಿರ್ದೇಶಕ ಡಾ.ವಿ.ಎ.ಬೆಕನಾಳ, ಎಂ.ಜಿ.ದಾಸರ ಕೃತಿ ಪರಿಚಯಿಸಿದರು. ಪಂ.ಬಿAದುಮಾಧವಾಚಾರ್ಯ ನಾಗಸಂಪಿಗಿ ಅಭಿನಂದ ನುಡಿ ಸಲ್ಲಿಸಿದರು. ಪ್ರೊ.ಎನ್.ಜಿ.ಕರೂರ, ಬಿ.ಎಚ್.ಆರ್.ಡಿ ನಿರ್ದೇಶಕ ಎಸ್.ಆರ್.ಮನಹಳ್ಳಿ, ಪ್ರೊ. ವಿ.ಆರ್.ಶಿರೋಳ ಇದ್ದರು. ಡಾ.ವಿ.ಎಸ್.ಕಟಗಿಹಳ್ಳಿಮಠ ವಂದಿಸಿದರು, ಶಿವಾನಂದ ಪೂಜಾರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net