ಶಿಕ್ಷಣ, ಉದ್ಯೋಗಕ್ಕೆ ಮಹತ್ವ ನೀಡಿ

14ankola2
Published on

ಅಂಕೋಲಾ: ಯುವಕರು ಶಿಕ್ಷಣ, ಕ್ರೀಡೆ, ಉದ್ಯೋಗಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ತಾ.ಪಂ. ಅಧ್ಯಕ್ಷೆ ಸುಜಾತಾ ಗಾಂವಕರ ಹೇಳಿದರು.

ತಾಲೂಕಿನ ಬಳಲೆಯ ಸಭಾಭವನದಲ್ಲಿ ನೆಹರು ಯುವ ಕೇಂದ್ರ ಕಾರವಾರ, ಶ್ರೀ ಶಾಂತಿಕಾ ಪರಮೇಶ್ವರಿ ಕ್ರೀಡಾ, ಸಾಂಸ್ಕೃತಿಕ ಹಾಗೂ ವಿವಿಧೋದ್ದೇಶಗಳ ಯುವಕ ಸಂಘದ ಆಶ್ರಯದಲ್ಲಿ ಯುವಕ ಸಂಘಗಳಿಗೆ ಕ್ರೀಡೋಪಕರಣ ವಿತರಣೆ ಹಾಗೂ ತಾಲೂಕು ಯುವಕ ಸಂಘಗಳ ಅಭಿವೃದ್ಧಿ ಶಿಬಿರ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿ.ಪಂ. ಸದಸ್ಯೆ ಸರಳಾ ನಾಯಕ, ಡಯಟ್ ಹಿರಿಯ ಉಪನ್ಯಾಸಕ ನಾಗರಾಜ ನಾಯಕ, ಗ್ರಾ.ಪಂ. ಸದಸ್ಯರಾದ ರವಿ ನಾಯಕ, ಶ್ರೀನಿವಾಸ ನಾಯಕ, ಯುವಕ ಸಂಘದ ಅಧ್ಯಕ್ಷ ನಾರಾಯಣ ಗೌಡ ಉಪಸ್ಥಿತರಿದ್ದರು.

ರಾಘವೇಂದ್ರ ಗೌಡ ಸ್ವಾಗತಿಸಿದರು. ದೇವರಾಯ ನಾಯಕ ನಿರ್ವಹಿಸಿದರು. ನೆಹರು ಯುವ ಕೇಂದ್ರದ ಅರವಿಂದ ಗೌಡ ವಂದಿಸಿದರು. ಕ್ರೀಡಾ ಸಾಮಗ್ರಿಯ ಕಿಟ್ ಅನ್ನು ನವೋದಯ ಯುವಕ ಸಂಘ ಹೆಗ್ರೆ, ಬೀರದೇವ ಯುವಕ ಸಂಘ ಕಾಮಗೆ, ಜೈ ಗಣೇಶ ಯುವಕ ಸಂಘ ಉಳವರೆ, ಯುವಶಕ್ತಿ ಯುವಕ ಸಂಘ ಸಗಡಗೇರಿ ಅವರಿಗೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net