

ಕಲಬುರಗಿ: ಪ್ರಾಥಮಿಕ ಶಾಲಾ ಸಹ ಶಿಕರನ್ನು ಶಾಲಾ ಶಿಕ ಹಾಗೂ ಮುಖ್ಯ ಶಿಕರ ಹುದ್ದೆಗೆ ಮುಂಬಡ್ತಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ರ‍್ಖಗೆ ಮನವಿ ಮಾಡಿದ್ದಾರೆ.
ಈ ಕುರಿತು ಶಾಲಾ ಶಿಣ ಮತ್ತು ಸಾರತಾ ಇಲಾಖೆ ಪ್ರಧಾನ ಕರ‍್ಯರ‍್ಶಿಗೆ ಪತ್ರ ಬರೆದಿರುವ ಅವರು, ರ‍್ಕಾರಿ ಪ್ರಾಥಮಿಕ ಶಾಲಾ ಸಹ ಶಿಕರ ಹುದ್ದೆಯಿಂದ, ಪದವೀಧರ ಪ್ರಾಥಮಿಕ ಶಾಲಾ ಶಿಕರ ಹುದ್ದೆಗೆ ಮುಂಬಡ್ತಿ ನೀಡಲು /ವಿಲೀನಗೊಳಿಸಲು ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಶಿಕರ ಹುದ್ದೆಗಳಿಗೆ ಮುಂಬಡ್ತಿ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಅಪರ ಆಯುಕ್ತರು ಸಲ್ಲಿಸಿರುವ ಪ್ರಸ್ತಾವನೆಯನ್ನು ನಿಯಮಾನುಸಾರ ಪರಿಶೀಲಿಸಿ ಕ್ರಮವಹಿಸುವಂತೆ ಪತ್ರದಲ್ಲಿ ತಿಳಿಸಿದ್ದಾರೆ.
ಮುಂಬಡ್ತಿಯಿಂದ ರ‍್ತಿ ಮಾಡಬೇಕಾದ ಪದವೀಧರ ಪ್ರಾಥಮಿಕ ಶಾಲಾ ಶಿಕರ ಒಟ್ಟು ೪೦೮೩ (ಸ್ಥಳಿಯ ವೃಂದದ ೩೩೦೦ ಹಾಗೂ ಉಳಿದ ಮೂಲ ವೃಂದದ ೭೮೩) ಹುದ್ದೆಗಳು ಖಾಲಿ ಉಳಿದಿವೆ. ಪುಸ್ತುತ ವಿಭಾಗದಲ್ಲಿ ಕರ‍್ಯನಿರತ ೧೮,೪೯೮ ಪ್ರಾಥಮಿಕ ಶಾಲಾ ಶಿಕರಲ್ಲಿ ಬಹುತೇಕ ಶಿಕರು ಪದವೀಧರರಾಗಿದ್ದು, ವೃತ್ತಿಪರ (ಡಿ.ಇಡಿ ಮತ್ತು ಬಿ.ಇಡಿ) ವಿದ್ಯರ‍್ಹತೆ ಹೊಂದಿರುವುದರಿಂದ ಇವರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕರ ಹುದ್ದೆಗೆ ಸುಲಭವಾಗಿ ಮುಂಬಡ್ತಿ ನೀಡಲು /ವಿಲೀನಗೊಳಿಸಬಹುದಾಗಿದೆ. ೨೦೧೬ರಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕರ ಹುದ್ದೆಗಳನ್ನು ಸೃಜಿಸಿ ಅವುಗಳನ್ನು ರ‍್ತಿ ಮಾಡಲು ವೃಂದ ಮತ್ತು ನೇಮಕಾತಿ ನಿಯಮ ರೂಪಿಸಿ ಜಾರಿಗೆ ತರಲಾಗಿದೆ. ಈ ಹುದ್ದೆಗಳನ್ನು ಮುಂಬಡ್ತಿ ಮೂಲಕ ರ‍್ತಿ ಮಾಡಲು ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಅಧಿಸೂಚನೆ ಹೊರಡಿಸಿಲ್ಲ. ಈ ಪ್ರಾಥಮಿಕ ಶಾಲಾ ಶಿಕರಿಗೆ ಇಲಾಖೆಯಲ್ಲಿ ಖಾಲಿ ಇರುವ ಮುಂಬಡ್ತಿ ಮೂಲಕ ರ‍್ತಿ ಮಾಡಬಹುದಾದ ಪ್ರಾಥಮಿಕ ಶಾಲಾ ಮುಖ್ಯ ಶಿಕರ ೧,೩೦೧ ಹುದ್ದೆಗಳಿಗೆ ಮುಂಬಡ್ತಿ ನೀಡಿ ರ‍್ತಿ ಮಾಡಬಹುದಾಗಿದ್ದು, ಇವುಗಳಲ್ಲಿ ಸ್ಥಳಿಯ ವೃಂದದ ೧,೦೪೭ ಹಾಗೂ ಉಳಿದ ಮೂಲ ವೃಂದದ ೨೫೪ ಹುದ್ದೆಗಳಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕಲಬುರಗಿ ವಿಭಾಗದಲ್ಲಿ ಮುಂಬಡ್ತಿ ಕೋಟಾದಲ್ಲಿ ಖಾಲಿ ಇರುವ ಒಟ್ಟು ೪,೦೮೩ ಪದವೀಧರ ಪ್ರಾಥಮಿಕ ಶಾಲಾ ಶಿಕರ ಹುದ್ದೆ ಹಾಗೂ ೧,೩೦೧ ಪ್ರಾಥಮಿಕ ಶಾಲಾ ಮುಖ್ಯ ಶಿಕರ ಹುದ್ದೆಗಳನ್ನು ಕೌನ್ಸೆಲಿಂಗ್ ಮೂಲಕ ರ‍್ತಿ ಮಾಡಲು ಅವಕಾಶವಿದೆ. ಇದರಿಂದಾಗಿ ಕಲಬುರಗಿ ವಿಭಾಗದ ಒಟ್ಟು ೫,೩೮೪ ಖಾಲಿ ಹುದ್ದೆಗಳನ್ನು ರ‍್ತಿ ಮಾಡಲು ಅನುಕೂಲವಾಗಲಿದೆ ಎಂದು ವಿವರಿಸಿದ್ದಾರೆ.