ಶಿಕ್ಷಕರ ಸಂಘದ ಕಚೇರಿಯಲ್ಲಿ ಕಳ್ಳತನ

3sdp3
Published on

ಸಿದ್ದಾಪುರ: ಪಟ್ಟಣದ ಹೊನ್ನೆಗುಂಡಿ ರಸ್ತೆ ಪಕ್ಕದ ಸರ್ಕಾರಿ ನೌಕರರ ಕಟ್ಟಡದಲ್ಲಿರುವ ತೀರ್ಥಹಳ್ಳಿಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ಧ ಸಹಕಾರಿ ಸಂಘದಲ್ಲಿನ ಕಪಾಟು ಒಡೆದು ಅದರಲ್ಲಿದ್ದ 1.94 ಲಕ್ಷ ರೂ. ಕಳ್ಳತನ ಮಾಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಕಚೇರಿಯ ಬಾಗಿಲು ಮುರಿಯಲು ವಿಫಲರಾದ ಕಳ್ಳರು ನಂತರ ಕಿಟಕಿಯ ಕಬ್ಬಿಣದ ಸರಳನ್ನು ಕತ್ತರಿಸಿ ಒಳನುಗ್ಗಿ ಹಣ ದೋಚಿದ್ದಾರೆ. ಮಂಗಳವಾರ ಬೆಳಗ್ಗೆ 10 ಗಂಟೆಗೆ ವ್ಯವಸ್ಥಾಕರು ಕಚೇರಿಗೆ ಬಂದ ನಂತರ ಕೃತ್ಯ ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net