

ಕಲಬುರಗಿ: ವಿಭಾಗ ವ್ಯಾಪ್ತಿಯಲ್ಲಿ ಶಿಕ್ಷಕರ ಪ್ರವೇಶ ಪರೀಕ್ಷೆ (ಟಿಇಟಿ) ಭಾನುವಾರ ಸುಸೂತ್ರವಾಗಿ ನಡೆಯಿತು. ಬೆಳಗ್ಗೆ ೯.೩೦ರಿಂದ ೧೨ ಹಾಗೂ ಮಧ್ಯಾಹ್ನ ೨ರಿಂದ ೪.೩೦ರವರೆಗೆ ಎರಡು ಅಧಿವೇಶನಗಳಲ್ಲಿ ಪರೀಕ್ಷೆ ನಡೆಯಿತು. ಕಲಬುರಗಿ ವಿಭಾಗದಲ್ಲಿ ಮೊದಲ ಅಧಿವೇಶನದಲ್ಲಿ ೧೭೭ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿತ್ತು. ೪೫೩೨೫ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ೪೦೧೮೦ ಜನ ಪರೀಕ್ಷೆ ಹಾಜರಾಗಿದ್ದು, ೫೧೪೫ ಜನ ಗೈರು ಹಾಜರಾಗಿದ್ದಾರೆ.
ಮಧ್ಯಾಹ್ನ ೨ರಿಂದ ೪.೩೦ರವರೆಗೆ ನಡೆದ ಎರಡನೇ ಅಧಿವೇಶನದಲ್ಲಿ ೨೧೮ ಪರೀಕ್ಷಾ ಕೇಂದ್ರ ಗುರುತಿಸಲಾಗಿತ್ತು. ೫೮೫೪೬ ಜನ ನೋಂದಣಿ ಮಾಡಿಕೊಂಡಿದ್ದು, ೫೪೫೯೦ ಜನ ಪರೀಕ್ಷೆಗೆ ಹಾಜರಾಗಿ ೪೦೫೬ ಜನ ಗೈರು ಹಾಜರಾಗಿದ್ದಾರೆ.