ಶಿಕ ವೃತ್ತಿಗೆ ಸಮಾಜದಲ್ಲಿ ದೊಡ್ಡ ಸ್ಥಾನ

Master
Published on

ಕಲಬುರಗಿ: ಶಿಕ ವೃತ್ತಿ ಶ್ರೇಷ್ಠವಾದದ್ದು, ಸಮಾಜದಲ್ಲೂ ದೊಡ್ಡ ಸ್ಥಾನವಿದೆ. ಹೀಗಾಗಿ ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಅರಿತು ಉತ್ತಮ ಕರ‍್ಯನರ‍್ವಹಿಸಬೇಕು ಎಂದು ಕಲಬುರಗಿ ಉತ್ತರ ವಲಯದ ೇತ್ರ ಶಿಣಾಧಿಕಾರಿ ಸೋಮಶೇಖರ ಹಂಚನಾಳ ಹೇಳಿದರು.

ಮಹಾತ್ಮಾ ಬಸವೇಶ್ವರ ಕಾಲನಿ ರ‍್ನಾಟಕ ಪಬ್ಲಿಕ್​ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸೇವಾ ನಿವೃತ್ತ ಮುಖ್ಯಗುರು ಶಾಂತಲಿಂಗಪ್ಪ ಹಿರೇನಾಗಾಂವ ಅವರಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ೩೬ ರ‍್ಷ ಶಾಂತಲಿಂಗಪ್ಪ ಮಾಸ್ಟರ್​ ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಅಲ್ಲದೆ ಮಕ್ಕಳಿಗೆ ಮನಮುಟ್ಟುವಂತೆ ಪಾಠ ಮಾಡುವ ಮೂಲಕ ಶಿಕ್ಷಕ ಹುದ್ದೆಗೆ ಗೌರವ ತಂದಿದ್ದಾರೆ ಎಂದು ಶ್ಲಾಸಿದರು.

ಕಲಬುರಗಿ ಉತ್ತರ ವಲಯದ ೇತ್ರ ಸಮನ್ವಯ ಅಧಿಕಾರಿ ಶಾಂತಾಬಾಯಿ ಬಿರಾದಾರ, ಪ್ರಾಥಮಿಕ ಶಾಲಾ ಶಿಕರ ಸಂದ ಕಲಬುರಗಿ ಉತ್ತರ ವಲಯ ಪ್ರಧಾನ ಕರ‍್ಯರ‍್ಶಿ ಅಶೋಕ ಸೊನ್ನ, ಕಲಬುರಗಿ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯಗುರುಗಳ ಸಂದ ಅಧ್ಯ ಮಲ್ಲಿಕರ‍್ಜುನ ಮಾತನಾಡಿದರು.

ಸೇವಾ ನಿವೃತ್ತ ಮುಖ್ಯಗುರು ಶಾಂತಲಿಂಗಪ್ಪ ಹೀರೆನಾಗಾಂವ ದಂಪತಿಯನ್ನು ಸನ್ಮಾನಿಸಲಾಯಿತು. ಪ್ರೌಢಶಾಲಾ ವಿಭಾಗದ ಮುಖ್ಯಸ್ಥೆ ಪ್ರತಿಮಾ ದೇವರು ಅಧ್ಯತೆ ವಹಿಸಿದ್ದರು. ಪ್ರಮುಖರಾದ ಎ.ಡಿ.ಭಾಷಾ, ಸಾಯಬಣ್ಣ ಮಹಾಂತಗೋಳ, ಉಷಾ ಗೊಬ್ಬೂರ, ಹುಚ್ಚಪ್ಪಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net