ಶಾಲೆಯ ಆವರಣದಲ್ಲೇ ಬಾಲಕನಿಗೆ ಕಚ್ಚಿದ ಹಾವು

IMG-20220906-WA0063.jpg
Published on

ಭಟ್ಕಳ : ಮುರ್ಡೇಶ್ವರದ ಶಾಲೆಯ ಆವರಣದಲ್ಲಿಯೇ ವಿದ್ಯಾರ್ಥಿಯೊಬ್ಬನಿಗೆ ಹಾವು ಕಚ್ಚಿದ್ದು, ಬಾಲಕನನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಮುರ್ಡೇಶ್ವರದ ಬಸ್ತಿಮಕ್ಕಿ ನಿವಾಸಿ ಅಲ್ಫಾಝ್ ಸರ್ತಾಜ್(12) ಅಸ್ವಸ್ಥ ಬಾಲಕ. ಮುರ್ಡೇಶ್ವರದ ನ್ಯಾಷನಲ್ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ 5ನೇ ತರಗತಿ ಕೊಠಡಿಯಲ್ಲಿ ಪಾಠ ಕೇಳುತ್ತಿರುವಾಗ ಆಕಸ್ಮಿಕವಾಗಿ ಪೆನ್ಸಿಲ್ ಕಿಟಿಕಿಯಿಂದ ಹೊರಗೆ ಬಿದ್ದಿದೆ. ಪೆನ್ಸಿಲ್ ತರಲು ಹೊರಗೆ ಹೋದ ಬಾಲಕನಿಗೆ ಅಲ್ಲೇ ಇರುವ ಹಾವೊಂದು ಕಚ್ಚಿ ಅಸ್ವಸ್ಥನಾಗಿದ್ದಾನೆ. ಕೂಡಲೇ ಬಾಲಕನ್ನು ಮುರ್ಡೇಶ್ವರ ಆಯುಷ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net