ಶಾಲೆಗೆ ಜಿಪಂ ಸಿಇಒ ಭೇಟಿ

4KWR7
Published on

ಕಾರವಾರ: ಕನಿಷ್ಠ ಮೂಲ ಸೌಕರ್ಯವೂ ಇಲ್ಲದೆ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದ್ದ ಸದಾಶಿವಗಡ ನಾಗಪೋಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಜಿಪಂ ಸಿಇಒ ಎಂ.ರೋಶನ್ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

ಬಾಡಿಗೆ ಕಟ್ಟಡ ಮೊದಲ ಮಹಡಿಯಲ್ಲಿ ಶಾಲೆ ನಡೆಯುತ್ತಿದ್ದು, ಶೌಚಗೃಹವಿಲ್ಲ. ಅಡುಗೆ ಮಾಡಲು ಪ್ರತ್ಯೇಕ ಕೊಠಡಿ ಇಲ್ಲ. ಮೇಲ್ಛಾವಣಿ, ನೆಲ ಸರಿ ಇಲ್ಲ. ವಿದ್ಯಾರ್ಥಿಗಳು ಅತ್ಯಂತ ಅಪಾಯದಲ್ಲಿ ಪಾಠ ಕಲಿಯುವಂತಾಗಿದೆ. ಈ ಕುರಿತು ವಿಜಯವಾಣಿ ಜ. 23ರಂದು ವರದಿ ಪ್ರಕಟಿಸಿತ್ತು. ಸ್ಪಂದಿಸಿದ ಸಿಇಒ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಶಾಲೆಗೆ ಪ್ರತ್ಯೇಕ ಕಟ್ಟಡ ನಿರ್ಮಾಣ ಸಂಬಂಧ ಪ್ರಸ್ತಾವನೆ ಸಿದ್ಧ ಮಾಡಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಗ್ರಾಪಂ ಪಿಡಿಒ ರಾಜೇಶ ನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net