

ಬಾಗಲಕೋಟೆ: ಮುಂದಿನ ಎರಡು ತಿಂಗಳಲ್ಲಿ ರಾಜ್ಯದ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ `ಮುಖಚಹರೆ ಆಧಾರಿತ(-ೆÃಸ್ ಐಡೆಂಟಿಫಿಕೇಷನ್) ಹಾಜರಾತಿ' ಆರಂಭಿಸಲಾಗುವುದು ಎಂದು ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.
ಬಾಗಲಕೋಟೆ ನವನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಮುಖಚಹರೆ ಆಧಾರಿತ ಹಾಜರಾತಿಗೆ ಬಜೆಟ್‌ನಲ್ಲಿ ಅನುದಾನ ಇಡಲಾಗಿದ್ದು, ಶೀಘ್ರದಲ್ಲೆ ಅದು ಜಾರಿಗೆ ಬರಲಿದೆ ಎಂದರು.
ಇದರ ಜೊತೆಗೆ ನೈತಿಕ ಶಿಕ್ಷಣದ ಕೊರತೆಯಿಂದ ಮಕ್ಕಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಾಲ ಗರ್ಭಿಣಿಯರ ಸಂಖ್ಯೆ ತಡೆಗಟ್ಟುವುದು ಸೇರಿದಂತೆ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು `ನೀತಿ ವಿಜ್ಞಾನ' ಪಠ್ಯ ಕಲಿಸಲಾಗುವುದು. ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಸೇರಿದಂತೆ ೨೨ ಸದಸ್ಯರಿಂದ ನೀತಿ ಶಿಕ್ಷಣ ಕುರಿತು ಅಭಿಪ್ರಾಯ ಪಡೆಯಲಾಗಿದೆ. ಹಿಂದೆ ಇದ್ದಂತೆ ನೀತಿ ಶಿಕ್ಷಣ ಬೋಧನೆಯನ್ನು ಪುನಾರಂಭಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಒಳಮೀಸಲಾತಿ ಜಾರಿಯಾದ ಕೂಡಲೇ ೧೬,೫೦೦ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಆದರ್ಶ ಶಾಲೆಗಳಲ್ಲಿ ಈ ವರ್ಷದಿಂದಲೇ ಪಿಯುಸಿ ಕಾಲೇಜು ಆರಂಭಿಸಲು ಅನುಮತಿ ನೀಡಲಾಗಿದೆ. ಶಾಲೆಗಳಿಗೆ ಮೂಲ ಸೌಲಭ್ಯ ಒದಗಿಸಲು ಆದ್ಯತೆ ನೀಡಲಾಗುವುದು ಎಂದು ಹೇಳಿದರು.