

ಬ್ರಹ್ಮಾವರ: ಸರ್ಕಾರಿ ಶಾಲೆಗಳ ಉತ್ತೇಜನಕ್ಕೆ ಸರ್ಕಾರದ ಜತೆ ಹಳೇ ವಿದ್ಯಾರ್ಥಿಗಳು, ದಾನಿಗಳು ಮತ್ತು ಉದ್ಯಮಿಗಳು, ಉದ್ಯಮ ಸಂಸ್ಥೆಗಳು ನೆರವು ನೀಡಿದಲ್ಲಿ ಹೆಚ್ಚು ಸಹಕಾರಿಯಾಗುತ್ತದೆ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗ ಬೋರ್ಡ್ ಶಾಲೆಯ ತೆರೆದ ಸಭಾಂಗಣ ಹಾಗೂ ಎಂಆರ್‌ಪಿಎಲ್ ಸಂಸ್ಥೆ ವತಿಯಿಂದ ನಿರ್ಮಾಣಗೊಂಡ ಹುಡುಗರ ಶೌಚಾಲಯ ಉದ್ಘಾಟಿಸಿ ಮಾತನಾಡಿದರು.
ಎಸ್‌ಡಿಎಂಸಿ ಉಪಾಧ್ಯಕ್ಷ ಅರುಣ್ ಭಂಡಾರಿ ಬೈಕಾಡಿ ಮಾತನಾಡಿದರು. ಎಂಆರ್‌ಪಿಎಲ್ ಸಂಸ್ಥೆಯ ವಾಲಕೊಂಡ ರಾವ್, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಂ, ಪ್ರೌಢಶಾಲೆಯ ಉವಾ ಪಿ., ಪ್ರಾಥಮಿಕ ಶಾಲೆಯ ಪುಷ್ಪಾ, ನೋಯಲ್ ಡಿಸೋಜ, ಚೇತನ್‌ಕುವಾರ್ ಶೆಟ್ಟಿ, ಮನೋಜ ನಾಯರ್, ರವಿ ಶೆಟ್ಟಿ, ರುಪತಿ ಬ್ರಹ್ಮಾವರ, ಶ್ರೀಧರ ಭಂಡಾರಿ, ರಾಮಕೃಷ್ಣ ಹಾರಾಡಿ, ಶಶಿಧರ ಗಾಣಿಗ, ಸಂತೋಷ ಶೆಟ್ಟಿ, ಉದಯ ಮಠದಬೆಟ್ಟು ಉಪಸ್ಥಿತರಿದ್ದರು.
ಪ.ಪೂ. ಕಾಲೇಜು ಪ್ರಾಂಶುಪಾಲ ರವೀಂದ್ರ ಉಪಾಧ್ಯಾಯ ಸ್ವಾಗತಿಸಿದರು. ಬೇಬಿ ವಂದಿಸಿದರು. ಶಿಕ್ಷಕ ಪ್ರದೀಪ್ ಪೂಜಾರಿ ನಿರೂಪಿಸಿದರು.