

ಕಾರ್ಕಳ: ಸ್ವದೇಶವೇ ನಮಗೆ ಪ್ರಾಣಪ್ರಿಯವಾಗಿರುವುದು. ತೃಪ್ತಿಯನ್ನು ಹಾಗೂ ಆನಂದವನ್ನು ಮಾತೃಭೂಮಿ ಮಾತ್ರ ನೀಡಲು ಸಾಧ್ಯ. ಅದೆಷ್ಟೋ ವೀರಸೇನಾನಿಗಳ ತ್ಯಾಗ, ಬಲಿದಾನಗಳಿಗೆ ದೇಶಭಕ್ತಿಯ ಸ್ಫೂರ್ತಿಗೆ ಸ್ವದೇಶ ಮಂತ್ರವೇ ಅಸ್ತ್ರವಾಗಿತ್ತು ಎಂದು ಮೈಸೂರಿನ ವಿವೇಕವಂಶಿ ಫೌಂಡೇಶನ್ನ ಸ್ಥಾಪಕ ನಿತ್ಯಾನಂದ ಎಸ್.ಬಿ. ಹೇಳಿದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಸಹಯೋಗದಲ್ಲಿ ನಡೆಯುತ್ತಿರುವ ಮೌಲ್ಯಸುಧಾ ಮಾಲಿಕೆ-39ರಲ್ಲಿ ಸ್ವದೇಶಿ ಚಿಂತನೆ-ಯುವಕರಲ್ಲಿ ರಾಷ್ಟ್ರಭಕ್ತಿಯ ಬೆಳವಣಿಗೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಅನಿಲ್ಕುಮಾರ್ ಜೈನ್, ಸಿಇಒ ಹಾಗೂ ಪ್ರಾಂಶುಪಾಲ ದಿನೇಶ್ ಎಂ.ಕೊಡವೂಕು, ಪಿಆರ್ಒ ಜ್ಯೋತಿ ಪದ್ಮನಾಭ ಭಂಡಿ, ಉಪಪ್ರಾಂಶುಪಾಲ ಶ್ರೀಸಾಹಿತ್ಯ ಉಪಸ್ಥಿತರಿದ್ದರು. ಆಂಗ್ಲಭಾಷಾ ಉಪನ್ಯಾಸಕಿ ದಿವ್ಯಾ ನಿರೂಪಿಸಿ, ವಂದಿಸಿದರು.