ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಭಸ್ಮ

IMG-20230819-WA0056.jpg
Published on

ಹಾರೋಹಳ್ಳಿ: ಪಟ್ಟಣದ ಬೆಂಗಳೂರು ಮುಖ್ಯ ರಸ್ತೆಯಲ್ಲಿ ಶಾರ್ಟ್ ಸರ್ಕೂಟ್ ನಿಂದಾಗಿ ಮೂರು ಅಂಗಡಿಗಳು ಬೆಂಕಿಗೆ ಆಹುತಿಯಾದ ಘಟನೆ ಶನಿವಾರ ನಡೆದಿದೆ.

ಪಟ್ಟಣದ ಇಂಡಿಯನ್ ಪೆಟ್ರೋಲ್ ಬಂಕ್ ಬಳಿ ಇರುವ ಮೆಟಲ್ ಶೀಟ್ ಅಂಗಡಿ ಹಾಗೂ ಬೈಕ್ ಶೀಟ್ ಕವರ್ ಅಂಗಡಿ ಮತ್ತು ಪಂಚರ್ ಅಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕುಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ.

 ಗುಜ್ಮಿಲ್ ಎಂಬುವವರಿಗೆ ಸೇರಿದ ಬೈಕ್ ಶೀಟ್ ಕವರ್ ಅಂಗಡಿ ಶಮೀರ್ ಪಾಷಾ ಎಂಬುವವರಿಗೆ ಸೇರಿದ ಮೆಟಲ್ ಶೀಟ್ ಅಂಗಡಿ ಬೆಂಕಿಗಾಹುತಿಯಾಗಿದೆ. ತಕ್ಷಣ ಅಗ್ನಿಶಾಮಕ್ಕೆ ಕರೆ ಮಾಡಿದ್ದು ಸ್ಥಳಕ್ಕೆ ತಡವಾಗಿ ಬಂದ ಅಗ್ನಿಶಾಮಕ ದಳ. ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದು.

ಸುಮಾರು 10 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗಹುತಿ ಆಗಿವೆ. ಅಂಗಡಿಗಳು ಶಾಮಿದ್ ಪಾಷ ಅವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ತಪ್ಪಿದ್ದ ಭಾರೀ ಅನಾಹುತ :ಬೆಂಕಿಗೆ ಅಹುತಿಯಾದ ಅಂಗಡಿಗಳ ಹತ್ತಿರದಲ್ಲಿ ಪೆಟ್ರೋಲ್ ಬಂಕ್ ಇದ್ದು ಭಾರೀ ಅನಾಹುತ ತಪ್ಪಿದ್ದು ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಇರುವುದರಿಂದ ಅಗ್ನಿ ಶಾಮಕ ಠಾಣೆ ನಿರ್ಮಿಸಲು ಸಾರ್ವಜನಿಕರ  ಅಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net