ಶಾಂತಿ, ಸೌಹಾರ್ದತೆಯಿಂದ ಬಕ್ರೀದ್ ಹಬ್ಬ ಆಚರಿಸಿ

bkt-3-2
ಬಾಗಲಕೋಟೆ ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಬಕ್ರೀದ್ ಹಬ್ಬದ ಅಂಗವಾಗಿ ಜರುಗಿದ ಶಾಂತತಾ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಽಕಾರಿ ಜಾನಕಿ ಕೆ.ಎಂ ಮಾತನಾಡಿದರು.
Published on

ಬಾಗಲಕೋಟೆ: ಜಿಲ್ಲೆಯಲ್ಲಿ ಜೂನ್ ೭ ರಂದು ಜರುಗಲಿರುವ ಬಕ್ರೀದ್ ಹಬ್ಬವನ್ನು ಶಾಂತಿ, ಸೌಹಾರ್ದತೆಯಿಂದ ವಿಜೃಂಬನೆಯಿAದ ಆಚರಿಸುವಂತೆ ಜಿಲ್ಲಾಽಕಾರಿ ಜಾನಕಿ ಕೆ.ಎಂ ಹೇಳಿದರು.

ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಬಕ್ರೀದ್ ಹಬ್ಬದ ಅಂಗವಾಗಿ ಜರುಗಿದ ಶಾಂತತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದಲ್ಲಿ ಆಚರಿಸಲಾಗುತ್ತಿರುವ ಎಲ್ಲ ಧರ್ಮಿಯರ ಹಬ್ಬಗಳು ಜಾಗತಿಕ ಮನ್ನಣೆ ಪಡೆದಿವೆ. ಆ ದಿಶೆಯಲ್ಲಿ ಬರುವ ಬಕ್ರೀದ್ ಹಬ್ಬವನ್ನು ಸಂಭ್ರಮದಿAದ ಆಚರಿಸಬೇಕು. ಶಾಂತಿ, ಸುವ್ಯವಸ್ಥೆ ಕಾಪಾಡಲು ನಿಮ್ಮ ರಕ್ಷಣೆಗಾಗಿ ಕಾನೂನುಗಳನ್ನು ಜಾರಿಗೆ ತರಲಾಗಿದ್ದು, ಅವುಗಳ ಪಾಲಿಸುವ ಕೆಲಸವಾಗಬೇಕು ಎಂದರು.

ಹಬ್ಬವೆAದರೆ ಒಳ್ಳೆಯ ಊಟ, ಒಳ್ಳೇಯ ನೋಟದೊಂದಿಗೆ ಅವಿಷ್ಮರಣೀಯವಾಗಿರಬೇಕು. ವರ್ಷಕ್ಕೊಂದು ಬಾರಿ ಈ ಹಬ್ಬಗಳಲ್ಲಿ ಧನಾತ್ಮಕ ಚಿಂತನೆಗಳಿAದ ಹೆಸರುವಾಸಿಗಳಾಗಬೇಕೆ ಹೊರತು ಋಣಾತ್ಮಕ ಘಟನೆಗಳಿಗೆ ಅವಕಾಶ ಕೊಡಬಾರದು. ಹಬ್ಬ ಆಚರಣೆಗಳಿಗೆ ಬೇಕಾಗುವ ಸಹಕಾರಕ್ಕೆ ಜಿಲ್ಲಾಡಳಿತ ಸದಾ ಸಿದ್ಧವಿದ್ದು, ವಿಜೃಂಬನೆಯಿAದ ಹಬ್ಬವನ್ನು ಆಚರಿಸುವಂತೆ ಜಿಲ್ಲಾಽಕಾರಿ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ ರೆಡ್ಡಿ ಮಾತನಾಡಿ, ಕಾನೂನುಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಮಾಡಲಾಗಿದ್ದು, ಅವುಗಳನ್ನು ನಿರ್ವಹಿಸುವ ಕಾರ್ಯ ನಮ್ಮದ್ದಾಗಿದ್ದು, ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶ ಇಲಾಖೆಯದಲ್ಲ. ಜಿಲ್ಲೆಯಾದ್ಯಂತ ಆಚರಿಸಲ್ಪಡುವ ಬಕ್ರೀದ್ ಹಬ್ಬದ ನಿಮಿತ್ಯ ೮ ಚಿತಾ ವಾಹನಗಳು ಕಾರ್ಯನಿರ್ವಹಿಸಲಿವೆ. ಅಕ್ರಮ ಜಾನುವಾರ ಸಾಗಾಣಿಕೆ ತಡೆಗಾಗಿ ೨೫ ಚೆಕ್‌ಪೋಸ್ಟಗಳನ್ನು ತೆರೆಯಲಾಗಿದೆ. ಈಗಾಗಲೇ ಜೂನ್ ೧ ರಿಂದ ಎಲ್ಲ ಕಸಾಯಿಖಾನೆಗಳನ್ನು ಬಂದ್ ಮಾಡಲಾಗಿದೆ. ಭಾವನೆಗಳಿಗೆ ದಕ್ಕೆ ಬರದ ಹಾಗೆ ಹಬ್ಬಗಳನ್ನು ಸಂಭ್ರಮದಿAದ ಆಚರಿಸಬೇಕು ಎಂದು ತಿಳಿಸಿದರು.

ಪಶು ಇಲಾಖೆಯ ಉಪನಿರ್ದೇಶಕ ಎಸ್.ಎಚ್.ಕರಡಿಗುಡ್ಡ ಮಾತನಾಡಿ ಅನಽಕೃತವಾಗಿ ಆಕಳು, ಕರು, ಎತ್ತು, ಒಂಟೆ ಹಾಗೂ ೧೩ ವರ್ಷದೊಳಗಿನ ಎಮ್ಮೆಗಳನ್ನು ಸಾಗಾಣಿಕೆ ಮಾಡುವುದು ಮತ್ತು ವಧೆ ಮಾಡುವದನ್ನು ಸಂಪೂರ್ಣವಾಗಿ ನಿಷೇಽಸಲಾಗಿದೆ. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ದನ, ಎಮ್ಮೆಗಳ ವಧೆಯಾಗುವ ಮತ್ತು ಅಕ್ರಮ ಸಾಗಾಣಿಕೆ ಆಗುವ ಸಾಧ್ಯತೆ ಇರುತ್ತದೆ. ಕೃಷಿ ಮತ್ತು ಹೈನುಗಾರಿಕೆ ಉದ್ದೇಶಗಳಿಗೆ ಮಾತ್ರ ಜಾನುವಾರು ಸಾಗಾಣಿಕೆ ಮಾಡಲು ಕಾಯ್ದೆಯಲ್ಲಿ ಅವಕಾಶವಿದ್ದು, ಪಶು ಸಂಗೋಪನಾ ಇಲಾಖೆಯಿಂದ ಅಕೃತ ಅನುಮತಿ ಪತ್ರ ಪಡೆಯುವುದು ಅವಶ್ಯಕತೆ ಇದೆ ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಪ್ರಸನ್ನ ದೇಸಾಯಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಸುರುಖೋಡ, ತಹಸೀಲ್ದಾರ ಅಮರೇಶ ಪಮ್ಮಾರ, ನಗರಸಭೆ ಆಯುಕ್ತ ವಾಸಣ್ಣಾ ಆರ್. ಸೇರಿದಂತೆ ಸಮುದಾಯದ ಮುಖಂಡರಾದ ಅಥಣಿ, ಎ.ಎ.ದಾಂಡಿಯಾ, ಅಶೋಕ ಲಿಂಬಾವಳಿ, ಶ್ರೀನಿವಾಸ ಬಳ್ಳಾರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net