ಶಾಂತಾ ಆಸ್ಪತ್ರೆಗೆಸಿಎಂ ಸಿದ್ದರಾಮಯ್ಯ ಚಾಲನೆ 17ರಂದು

Dr Sanjeev Patil
Published on

ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ಸುಸಜ್ಜಿತ, ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಎಂ.ವೈ. ಪಾಟೀಲ್ ಫೌಂಡೇಷನ್‌ನಿಂದ ವಿಶ್ವದರ್ಜೆಯ ಚಿಕಿತ್ಸಾ ಸೌಲಭ್ಯ, ಉತ್ಕೃಷ್ಟ ಆರೋಗ್ಯ ಸೇವೆ ಹೊಂದಿರುವ ಶಾಂತಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತಲೆ ಎತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಬೆಳಗ್ಗೆ ೧೧.೪೫ಕ್ಕೆ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಆಸ್ಪತ್ರೆ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಸಂಜೀವ್ ಪಾಟೀಲ್ ತಿಳಿಸಿದರು.
ಹೈಕೋರ್ಟ್ ಹತ್ತಿರದ ೫೦ ಹಾಸಿಗೆ ಆಸ್ಪತ್ರೆಯಲ್ಲಿ ೧೮ ಬೆಡ್ ಐಸಿಯು, ನಾಲ್ಕು ಆಪರೇಷನ್ ಥಿಯೇಟರ್ ಜತೆ ಒಂದೇ ಸೂರಿನಡಿ ಎಲ್ಲ ಆರೋಗ್ಯ ಸೇವೆ

ಗಲಿದೆ. ಶಸ್ತçಚಿಕಿತ್ಸೆ, ಫಾರ್ಮಸಿ ಇತರ ಸೇವೆಗಳಲ್ಲಿ ಶೇ.೩೦ ರಿಯಾಯಿತಿ ನೀಡಲಾಗುವುದು. ಕಡುಬಡವರಿದ್ದಲ್ಲಿ ಉಚಿತವಾಗಿ ಶಸ್ತಚಿಕಿತ್ಸೆ ಮಾಡಲಾಗುವುದು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಚಿವರಾದ ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ, ರಹೀಮ್ ಖಾನ್, ಶರಣಬಸಪ್ಪ ದರ್ಶನಾಪುರ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಬಿ.ಆರ್. ಪಾಟೀಲ್, ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ. ಪಾಟೀಲ್, ಡಾ.ಚಂದ್ರಶೇಖರ ಪಾಟೀಲ್, ಶಶೀಲ್​ ಜಿ.ನಮೋಶಿ, ಅರವಿಂದ ಅರಳಿ, ತಿಪ್ಪಣ್ಣಪ್ಪ ಕಮಕನೂರ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ, ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ ಮುಖ್ಯ ಅತಿಥಿಗಳಾಗಿರುವರು ಎಂದರು.

ವೈದ್ಯೆ ಡಾ.ಅಂಬಿಕಾ ಪಾಟೀಲ್, ಹಿರಿಯ ವೈದ್ಯ ಡಾ.ಸಂತೋಷ, ಡಾ.ಶರಣು ಜಾಬಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net