ಶರ್ಯತ್ತು ವಿಜೇತರಿಗೆ ಬಹುಮಾನ ವಿತರಣೆ

7Rayabag3
Published on

ರಾಯಬಾಗ: ತಾಲೂಕಿನ ಹೊಸದಿಗ್ಗೇವಾಡಿ ಗ್ರಾಮದ ಲಕ್ಷ್ಮೀದೇವಿ ಜಾತ್ರೆ ಮೂರು ದಿನ ವಿಜೃಂಭಣೆಯಿಂದ ಜರುಗಿತು. ಜಾತ್ರೆ ಅಂಗವಾಗಿ ಆಯೋಜಿಸಿದ್ದ ವಿವಿಧ ಶರ್ಯತ್ತು ವಿಜೇತರಿಗೆ ಬುಧವಾರ ಬಹುಮಾನ ವಿತರಿಸಲಾಯಿತು. ಎತ್ತಿನಗಾಡಿ ಶರ್ಯತ್ತಿನಲ್ಲಿ ನರವಾಡದ ಸಚಿನ ಕಟ್ಟಿಕರ ಪ್ರಥಮ, ಮಾಣಕಾಪುರದ ಸಂದೀಪ ಪವಾರ ದ್ವಿತೀಯ, ರಾಯಬಾಗದ ಮೋಸಿನ್ ಮುಲ್ಲಾ ತೃತೀಯ ಬಹುಮಾನ ಪಡೆದರು.

ಕುದುರೆಗಾಡಿ ಶರ್ಯತ್ತಿನಲ್ಲಿ ಸೌಂದತ್ತಿಯ ಚೇತನ ಕಾಟೆ ಪ್ರಥಮ, ದಿಗ್ಗೇವಾಡಿಯ ರಾಕೇಶ ಬೆನಾಡೆ ದ್ವಿತೀಯ, ಉಮ್ರಾಣಿಯ ಸಿದ್ದು ಉಮರಾಣಿ ತೃತೀಯ ಬಹುಮಾನ ಪಡೆದರು. ಕುದುರೆ ಶರ್ಯತ್ತಿನಲ್ಲಿ ಚಿಂಚಲಿಯ ಸುರೇಶ ಪ್ರಥಮ, ವಿನಯ ದ್ವಿತೀಯ, ನಂದಿಕುರಳಿಯ ಮಾಳಪ್ಪ ತೃತೀಯ ಬಹುಮಾನ ಪಡೆದರು.

ಸೈಕಲ್ ಶರ್ಯತ್ತಿನಲ್ಲಿ ಪಾಮಲದಿನ್ನಿಯ ಅಪ್ಪು ಮಾಳ್ಯಾಗೋಳ ಪ್ರಥಮ, ಧರ್ಮಟ್ಟಿಯ ಬಸು ಧರ್ಮಟ್ಟಿ ದ್ವಿತೀಯ, ಇಚಲಕರಂಜಿಯ ಬಾಳು ಹಿರೇಮಠ ತೃತೀಯ ಬಹುಮಾನ ಪಡೆದರು. ಓಡುವ ಶರ್ಯತ್ತಿನಲ್ಲಿ ಬಡಚಿಯ ಹನುಮಂತ ನಾಯಿಕ ಪ್ರಥಮ, ಶಿವಾನಂದ ನಾಯಿಕ ದ್ವಿತೀಯ, ಅಲಖನೂರದ ಪರಸಪ್ಪ ಹಸರೆ ತೃತೀಯ ಬಹುಮಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net