ಶರನ್ನವರಾತ್ರಿ ಶಾರದಾ ಪೂಜೆ

29kkr1( bombe mane -prasad sarada puje
Published on

ಕಿಕ್ಕೇರಿ: ಪಟ್ಟಣದ ಓಣಿ ನಾರಾಯಣ ಜೋಯಿಸ್ ಬೀದಿಯ ಪುರೋಹೀತ್ ರಾಮಪ್ರಸಾದ್ ಅಂಬಿಕಾ ಎಂಬುವರ ಮನೆಯಲ್ಲಿ ಶರನ್ನವರಾತ್ರಿಯ ಸೋಮವಾರ ಶಾರದಾ ಪೂಜೆ ಆಚರಿಸಲಾಯಿತು.

ಶಾರದಾಪೂಜೆಯಲ್ಲಿ ದಸರಾ ಬೊಂಬೆಯನ್ನು ಪ್ರತಿಷ್ಠಾಪಿಸಲಾಗಿತ್ತು. ಮಕ್ಕಳಿಗೆ ಶಾರದಾಪೂಜೆ, ದಸರಾ ಬೊಂಬೆ ಇತಿಹಾಸ ತಿಳಿಸಿಕೊಡಲಾಯಿತು. ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಸಂಕೇತವಾಗಿ ಮಾಡಲಾಯಿತು. ಪುಸ್ತಕ, ಲೇಖನ ಸಾಮಗ್ರಿ ವಿತರಿಸಿ ಶರನ್ನವರಾತ್ರಿಯಲ್ಲಿ ಒಂಬತ್ತು ದುರ್ಗಾದೇವಿಯ ಇತಿಹಾಸ, ನೈವೇದ್ಯ, ಉಡುಗೆ, ಸರ್ವಸಿದ್ಧಿ ಪೂಜೆಯನ್ನು ತಿಳಿಸಿಕೊಡಲಾಯಿತು.

ಹಂಪೆ ಕಲ್ಲಿನ ರಥ, ಪಟ್ಟಾಭಿರಾಮ, ಪುರಾತನ ಕಾಲದ ಬಾವಿ, ಯಕ್ಷಗಾನ, ಕಾಮಧೇನು, ಜೋಡಿ ಪಟ್ಟದಬೊಂಬೆ, ಬುದ್ಧ, ಮಂಗಳವಾದ್ಯ ನುಡಿಸುವ ಕಾಳಿಂಗಮರ್ಧನ, ಸಿರಿಧಾನ್ಯಗಳ ಪರಿಚಯ, ರಾಮಾಯಣ, ಮಹಾಭಾರತದ ಬೊಂಬೆ, ದಸರಾ ಜಂಭೂ ಸವಾರಿ, ರಾಜ ರಾಣಿ ಬೊಂಬೆ, ಶಕ್ತಿಮಾನ್ ಆಂಜನೇಯ ಮತ್ತಿತರ ಬೊಂಬೆಗಳನ್ನು ನೋಡಿ ಕಣ್ತುಂಬಿಕೊಂಡರು.

ಅರ್ಚಕ ಸೀತಾರಾಮು, ಅಂಬಿಕಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net