ಶರಣರ ಸನ್ನಿಧಿಗೆ ಲಕ್ಷ ಬಿಲ್ವಾರ್ಚನೆ ನ.೧ರಂದು

Sharanabasavesghwara (KALABURAGI) (2)
Published on

ಕಲಬುರಗಿ: ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನದ ೯ನೇ ಪೀಠಾಧಿಪತಿ ಚಿ.ದೊಡ್ಡಪ್ಪ ಅಪ್ಪ ಜನ್ಮದಿನ ನಿಮಿತ್ತ ನ.೧ರಂದು ಶರಣಬಸವೇಶ್ವರ ದೇವಾಲಯದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾಧ್ಯಕ್ಷ ದಯಾನಂದ ಪಾಟೀಲ್ ಮತ್ತು ರಾಜ್ಯ ಸಮಿತಿ ಸದಸ್ಯ ಶ್ರೀಧರ ನಾಗನಹಳ್ಳಿ ತಿಳಿಸಿದ್ದಾರೆ. ಬೆಳಗ್ಗೆ ೫.೩೦ರಿಂದಲೇ ಶರಣಬಸವೇಶ್ವರ ಸನ್ನಿಧಿಗೆ ಲಕ್ಷ ಪುಷ್ಪ ಮತ್ತು ಬಿಲ್ವಾರ್ಚನೆ ನಡೆಯಲಿದೆ. ಬಳಿಕ ದೇವಾಲಯ ಆವರಣದಲ್ಲಿ ಶಿವದೀಕ್ಷೆ ಮತ್ತು ೫೦೧ ಜನರಿಂದ ಸಾಮೂಹಿಕ ಇಷ್ಟಲಿಂಗ ಪೂಜೆ ಜರುಗಲಿದೆ. ಜಿಲ್ಲೆಯ ೩೩ ಸ್ವಾಮೀಜಿಗಳು ಸೇರಿ ಲಕ್ಷ ಬಿಲ್ವಾರ್ಚನೆಯನ್ನು ಮಂತ್ರಘೋಷದೊAದಿಗೆ ಮಾಡುವರು. ಅಲ್ಲದೆ ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಸಿಕೊಡುವರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ವೇದಿಕೆ ಹಿತೈಷಿಗಳು ಪಾಲ್ಗೊಳ್ಳುವಂತೆ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net