ಶರಣರ ಜೀವನ ಎಲ್ಲರಿಗೂ ಆದರ್ಶ - ಶಿವಾಚಾರ್ಯ ಸ್ವಾಮೀಜಿ

02
Published on


ಚಿಕ್ಕೋಡಿ: ಹನ್ನೆರಡನೆಯ ಶತಮಾನದಲ್ಲಿ ಬದುಕಿದ ಶರಣರ ಜೀವನ ಆದರ್ಶವಾದದ್ದು, ಅವರೆಲ್ಲರೂ ಕಾಯಕ ಜೀವಿಗಳಾಗಿ ಸಂತೃಪ್ತಿ ಹೊಂದಿದವರು ಎಂದು ಗಡಹಿಂಗ್ಲಜದ ಗುರುಸಿದ್ದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಚರಮೂರ್ತಿ ಮಠದಲ್ಲಿ ಬಸವಜಯಂತಿ ಹಿನ್ನೆಲೆಯಲ್ಲಿ ಬುಧವಾರ ಆಯೋಜಿಸಿದ್ದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ-ಮಹಾರಾಜರು ಸಹ ಶರಣತತ್ತ್ವಕ್ಕೆ ಹೊಂದಿಕೊಂಡು ಬದುಕಿದ್ದರು.

ಬಸವ ಜಯಂತಿ ಬರೀ ಬಸವಣ್ಣನವರ ಭಾವಚಿತ್ರ, ಪೂಜೆ,ಮೆರವಣಿಗೆ ಅಷ್ಟಕ್ಕೆ ಸೀಮಿತವಾಗಬಾರದು. ಶರಣರ ಬದುಕು ಬೆಳಕು ಹೇಗಿತ್ತು ಎನ್ನುವುದನ್ನು ತಿಳಿಸಲು ಈ ಪ್ರವಚನ ಕಾರ್ಯಕ್ರಮ ಬಹಳ ಅವಶ್ಯ ಎಂದರು. ಸಮ್ಮುಖವನ್ನು ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ವಹಿಸಿದ್ದರು.

ನೂಲ ಸುರಗೀಶ್ವರ ಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಗಡಹಿಂಗ್ಲಜದ ಜಡೆಸಿದ್ದೇಶ್ವರ ಬಿಲ್ವಾಶ್ರಮದ ಮಹಾಂತ ಸಿದ್ದೇಶ್ವರ ಸ್ವಾಮೀಜಿ, ಕುಲವಳ್ಳಿ ಸುಕಮಾರ ಯೋಗಾಶ್ರಮದ ಓಂ ಗುರೂಜಿ ಉಪಸ್ಥಿತರಿದ್ದರು. ಅಲಿಸಾಹೇಬ ಬಹುರೂಪಿ, ಕಾಳಪ್ಪ ಬಡಿಗೇರ ಸಂಗೀತ ಸೇವೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net