ಶರಣರ ಅನುಭಾವ ಚಿಂತನೆ ಸಾರ್ವಕಾಲಿಕ

0608Klb03
Published on

ಕಲಬುರಗಿ: ಸಾರ್ವಕಾಲಿಕವಾಗಿರುವ ಶರಣರ ಚಿಂತನೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ನೆಮ್ಮದಿ ಕಾಣಲು ಸಾಧ್ಯ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ಶ್ರಾವಣ ಮಾಸ ನಿಮಿತ್ತ ಜಯನಗರ ಶಿವಮಂದಿರದಲ್ಲಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ನಿಂದ ಸೋಮವಾರ ಸಂಜೆ ಹಮ್ಮಿಕೊಂಡ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಒಂದು ತಿಂಗಳ ಪುರಾಣ ಉದ್ಘಾಟಿಸಿ ಮಾತನಾಡಿ, ಪುರಾಣ, ಪ್ರವಚನಗಳಿಂದ ಭಕ್ತಿ ಮೂಡುವ ಜತೆಗೆ, ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರಣೆ ದೊರೆಯುತ್ತದೆ. ಮೇಳು, ಕೀಳು ತಾರತಮ್ಯ ಇರುವುದಿಲ್ಲ. ಸಮಾನತೆಯ ಬೆಳಕು ಚೆಲ್ಲುವ ಕಾರ್ಯ ಮಾಡಿದವರೇ ಶರಣರು ಎಂದರು.
ಪುರಾಣ, ಪ್ರವಚನಗಳು ಗ್ರಂಥಾಲಯಗಳಾಗಿವೆ. ಶರಣರ ಸಾಧನೆ, ತ್ಯಾಗದ ಜೀವನ ತಿಳಿಯಬಹುದು. ಪುರಾಣಗಳು ಹೆಚ್ಚು ನಡೆಯಬೇಕು ಎಂದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಶರಣಬಸವೇಶ್ವರರು ಕರುಣಾಮಯಿ. ಬೇಡಿದ ಭಕ್ತರಿಗೆ ನಿರಾಸೆ ಮೂಡಿಸುವುದಿಲ್ಲ. ಜೀವನ ಚರಿತ್ರೆ ತೆರದ ಪುಸ್ತಕದಂತೆ ಇತ್ತು. ಶರಣಬಸವೇಶ್ವರು ಕಳ್ಳನ ಮನುಸ್ಸು ಪರಿವರ್ತನೆ ಮಾಡಿ ಆದರ್ಶ ವ್ಯಕ್ತಿಯಾಗಿ ರೂಪಿಸಿದರು ಎಂದು ತಿಳಿಸಿದರು.
ಹೋರಾಟಗಾರ ಲಕ್ಷö್ಮಣ ದಸ್ತಿ ಮಾತನಾಡಿ, ಶರಣಬಸವೇಶ್ವರರು ಪವಾಡ ಪುರುಷರು. ಅವತ್ತಿನ ದಿನದ¯್ಲÉÃ ಅನ್ನ ದಾಸೋಹದ ಮಹಿಮೆ ಇಡೀ ಜಗತ್ತಿಗೆ ಪರಿಚಯಿಸಿದ್ದಾರೆ ಎಂದರು.
ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪುರ ಮಾತನಾಡಿ, ಜಯನಗರ ಶಿವಮಂದಿದಲ್ಲಿ ಪ್ರತಿ ವರ್ಷ ಶ್ರಾವಣ ಮಾಸವಲ್ಲದೆ ನಿರಂತರ ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ. ಗುಡಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ ಎಂದರು.
ಪ್ರಮುಖರಾದ ಎಂ.ಡಿ.ಮಠಪತಿ, ಬಸವರಾಜ ಅನ್ವರಕರ, ಸಿದ್ಧಲಿಂಗ ಗುಬ್ಬಿ, ಬಸವರಾಜ ಮಾಗಿ, ಶಿವಕುಮಾರ ಪಾಟೀಲ್, ವೀರೇಶ ಹುಡುಗಿ, ಮನೋಹರ ಬಡಶೇಷಿ, ಬಂಡೆಪ್ಪ ಕೇಸೂರ, ಭೀಮಾಶಂಕರ ಶೆಟ್ಟಿ, ಗುರುಪಾದಪ್ಪ ಕಾಂತಾ, ನಾಗರಾಜ ಖೂಬಾ, ಮಲ್ಲಿಕಾರ್ಜುನ ಕ¯್ಲÁ, ಬಸವರಾಜ ಪುರ್ಮಾ, ಮಲ್ಲಯ್ಯ ಸ್ವಾಮಿ ಗಂಗಾಧರಮಠ, ಶಿವಪುತ್ರಪ್ಪ ಮರಡಿ, ಮಲ್ಲಯ್ಯ ಸ್ವಾಮಿ ಬೀದಿಮನಿ, ಜಗನ್ನಾಥ ಪಾಟೀಲ್, ವಿನೋದ ಪಾಟೀಲ್, ಶೈಲಜಾ ವಾಲಿ, ಸುಜಾತಾ ಭೀಮಳ್ಳಿ, ಸುರೇಖಾ ಬಾಲಕೊಂದೆ, ಸುಷ್ಮಾ ಮಾಗಿ ಇತರರಿದ್ದರು.
ಪಂ.ಮಲ್ಲಿಕಾರ್ಜುನ ಶಾಸ್ತಿçà ಪುರಾಣ ನಡೆಸಿಕೊಟ್ಟರು. ಸೂರ್ಯಕಾಂತ ಕೆ.ಬಿ ಸ್ವಾಗತಿಸಿದರು. ಅನುರಾಧಾ ಕೆ ಪ್ರಾರ್ಥಿಸಿದರು. ಜಿ.ಜಿ.ವಣಿಕ್ಯಾಳ ನಿರೂಪಣೆ ಮಾಡಿದರು. ಉಪಾಧ್ಯP್ಷÀ ವಿರೇಶ ದಂಡೋತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net