ಶರಣಬಸವ ವಿವಿಯಿಂದ ಫಾರ್ಮಾ ಕೋರ್ಸ್ ಪ್ರಾರಂಭ

DR.SHARANABASAVAPPA APPA (GLB)
Published on

ಕಲಬುರಗಿ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಿ.ಫಾರ್ಮಾ ಮತ್ತು ಡಿ.ಫಾರ್ಮಾ ಹೊಸ ಕೋರ್ಸ್ ಪರಿಚಯಿಸುತ್ತಿದ್ದು, ಪ್ರತಿ ಕೋರ್ಸ್ನಲ್ಲಿ 60 ವಿದ್ಯಾರ್ಥಿಗಳ ಸೇರ್ಪಡೆಯೊಂದಿಗೆ ಶರಣಬಸವ ವಿಶ್ವವಿದ್ಯಾಲಯ ಶೈಕ್ಷಣಿಕ ಅವಕಾಶದ ಮತ್ತೊಂದು ಮಾರ್ಗ ತೆರೆದಿದೆ.
ವಿವಿ ಕುಲಸಚಿವ ಡಾ.ಅನೀಲಕುಮಾರ ಬಿಡವೆ ಹಾಗೂ ಡೀನ್ ಡಾ.ಲಕ್ಷ್ಮೀ ಪಾಟೀಲ್ ಮಾಕಾ ಶುಕ್ರವಾರ ಜಂಟಿ ಹೇಳಿಕೆ ನೀಡಿ, 60 ವಿದ್ಯಾರ್ಥಿಗಳ ಪ್ರವೇಶದೊಂದಿಗೆ ಎರಡು ವರ್ಗಗಳ ಡಿ.ಫಾರ್ಮಾ ಕೋರ್ಸ್ ಆರಂಭಿಸಲು ಅನುಮೋದನೆ ದೊರೆತಿದೆ. ಈಗ ನಾಲ್ಕು ವರ್ಷದ ಬಿ.ಫಾರ್ಮಾ ಕೋರ್ಸ್ ಪ್ರಾರಂಭಿಸುವ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ ಎಂದು ತಿಳಿಸಿದ್ದಾರೆ.
ಶರಣಬಸವ ವಿಶ್ವವಿದ್ಯಾಲಯ ೨೦೨೩-೨೪ರ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳನ್ನು ಎರಡೂ ಕೋರ್ಸ್ಗಳಲ್ಲಿ ಪ್ರವೇಶ ಪಡೆದುಕೊಳ್ಳಲು ಅನುಮತಿ ನೀಡಿದೆ. ಕಲಬುರಗಿಯಲ್ಲಿ ಈ ಸೌಲಭ್ಯದ ಮೂಲಕ ಬಹುಕಾಲದ ಕನಸು ನನಸಾಗಿಸಲು ಹಾಗೂ ಪೂರ್ಣ ಪ್ರಮಾಣದ ವೈದ್ಯಕೀಯ ವಿಜ್ಞಾನ ಕೇಂದ್ರ ಸ್ಥಾಪಿಸಲು ಮೊದಲ ಹೆಜ್ಜೆ ಇದಾಗಿದೆ ಎಂದು ಹೇಳಿದ್ದಾರೆ.
ವಿವಿ ಸಂಸ್ಥಾಪಕರು ಹಾಗೂ ಕುಲಾಧಿಪತಿ, ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಶ್ರೀ ಡಾ.ಶರಣಬಸವಪ್ಪ ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಕಾರ್ಯದರ್ಶಿ ಬಸವರಾಜ ದೇಶಮುಖ, ವಿವಿ ಕುಲಪತಿ ಡಾ.ನಿರಂಜನ್ ನಿಷ್ಠಿ ಇತರರು ಈ ಎರಡೂ ಹೊಸ ಕೋರ್ಸ್ ಪ್ರಾರಂಭಿಸಲು ಎಲ್ಲ ಅವಶ್ಯಕತೆ ಪೂರೈಸಲು ಹಗಲಿರುಳು ಶ್ರಮಿಸಿದ ವಿಶ್ವವಿದ್ಯಾಲಯದ ಇಡೀ ತಂಡವನ್ನು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net