ಶರಣಬಸವ ವಿವಿ-ಮೇದಿನಿ ಟೆಕ್ನಾಲಜಿಸ್ ಒಡಂಬಡಿಕೆ

Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಪ್ರತಿಷ್ಠಿತ ಶರಣಬಸವ ವಿಶ್ವವಿದ್ಯಾಲಯ ತನ್ನ ಚಟುವಟಿಕೆಗಳನ್ನು ವಿಸ್ತರಿಸಲು ಉದ್ಯಮ ಆಧಾರಿತ ಕಾರ್ಯಕ್ರಮಗಳ ಅಪ್‌ಗ್ರೇಡ್ ಹಾಗೂ ವಿವಿ ಇಂಜಿನಿಯರಿAಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್ಗಳಲ್ಲಿ ಡಿಜಿಟಲೀಕರಣ ಇತರ ಶೈಕ್ಷಣಿಕ ಕಾರ್ಯಗಳ ಕುರಿತು ಸಾಫ್ಟ್ವೇರ್ ಕ್ಷೇತ್ರದ ದಿಗ್ಗಜ ಮೇದಿನಿ ಟೆಕ್ನಾಲಜಿಸ್ ಜತೆ ಒಡಂಬಡಿಕೆ ಮಾಡಿಕೊಂಡಿದೆ.
ಮೇದಿನಿ ಟೆಕ್ನಾಲಜಿಸ್ ಪರವಾಗಿಯೂ ಸಂಸ್ಥಾಪಕ ನಿರ್ದೇಶಕ ಪ್ರದೀಪ ಕೊಲ್ಲೂರ ಮತ್ತು ಕಾರ್ಯಕ್ರಮ ಸಂಯೋಜಕ ನಿಜಗುಣಸ್ವಾಮಿ ನೆಗಲೂರಮಠ ಹಾಗೂ ಶರಣಬಸವ ವಿವಿ ಪರವಾಗಿ ಕುಲಾಧಿಪತಿಗಳಾದ ಶ್ರೀ ಡಾ.ಶರಣಬಸವಪ್ಪ ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಸಮ್ಮುಖದಲ್ಲಿ ಕುಲಸಚಿವ ಡಾ.ಅನಿಲಕುಮಾರ ಬಿಡವೆ ಶನಿವಾರ ಒಡಂಬಡಿಕೆ ಪತ್ರಗಳಿಗೆ ಸಹಿ ಹಾಕಿದರು.
ಮೇದಿನಿ ಟೆಕ್ನಾಲಜಿಸ್ ಜತೆ ಐದು ವರ್ಷ ಎಂಒಯು ಉದ್ಯಮದ ಅವಶ್ಯಕತೆಗೆ ಅನುಗುಣ ಇಂಜಿನಿಯರಿAಗ್ ಮತ್ತು ಆರ್ಕಿಟೆಕ್ಚರ್ ವಿಭಾಗಗಳಲ್ಲಿ ಡಿಜಿಟಲ್ ಪರಿವರ್ತನೆಗೊಳಿಸಲು ಪೂರಕವಾಗಿದೆ. ಆ ಸಂಸ್ಥೆ ತಜ್ಞರು ತರಬೇತಿ ಮತ್ತು ಪ್ರಮಾಣೀಕೃತ ಕಾರ್ಯಕ್ರಮ ನಡೆಸಿಕೊಡುವುದರಿಂದ ವಿದ್ಯಾರ್ಥಿಗಳಿಗೆ ಇತ್ತೀಚಿನ ತಂತ್ರಜ್ಞಾನದ ಬೆಳಗವಣಿಗೆ ಸುಲಭವಾಗಿ ತಿಳಿದುಕೊಳ್ಳಲು, ಉದ್ಯಮಕ್ಕೆ ಸಿದ್ಧರಾಗಲು ಸಹಾಯ ಮಾಡುತ್ತದೆ ಎಂದು ಡಾ.ಬಿಡವೆ ಹೇಳಿದರು.
ವಿದ್ಯಾರ್ಥಿಗಳ ಕೌಶಲ ಉನ್ನತೀಕರಿಸಲು ಆಟೋಡೆಸ್ಕ್, ಬೆಂಟ್ಲಿ, ಟ್ರಿಂಬಲ್, ಪಿಟಿಸಿ ಮತ್ತು ಡಸಾಲ್ಟ್ನಂತಹ ಅಗತ್ಯ ಸಾಫ್ಟ್ವೇರ್‌ಗಳನ್ನು ಒದಗಿಸಲು ಮೇದಿನಿ ಟೆಕ್ನಾಲಜಿಸ್ ವಿಶ್ವವಿದ್ಯಾಲಯವನ್ನು ಬೆಂಬಲಿಸುತ್ತದೆ. ಅಲ್ಲದೆ ಲೂಮಿಯನ್, ಎನ್ಸ್ಕೇಪ್ ಇತರ ಕೆಲ ತಂತ್ರಾAಶಗಳ ಸರಬರಾಜಿನಿಂದ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಮೇದಿನಿಯವರು ಇಂಜಿನಿಯರಿAಗ್ ಮತ್ತು ಆರ್ಕಿಟೆಕ್ಚರ್ ವಿಭಾಗದ ವಿದ್ಯಾರ್ಥಿಗಳಿಗೆ ೫೦೦೦ ರೂ. ಸ್ಪೆÊಫಂಡ್ ಜತೆಗೆ ಆರು ತಿಂಗಳ ಇಂಟರ್ನ್ಶಿಪ್ ಕಾರ್ಯಕ್ರಮ ಒದಗಿಸಲು ಹಾಗೂ ಅವರಲ್ಲಿ ಶೇ.೨೫ ವಿದ್ಯಾರ್ಥಿಗಳಿಗೆ ೩.೫೦ ಲಕ್ಷ ರೂ. ಪ್ಯಾಕೇಜ್‌ನೊಂದಿಗೆ ಉದ್ಯೋಗಾವಕಾಶ ನೀಡಲು ಒಪ್ಪಿದ್ದಾರೆ.
ವಿವಿ ಸಿವಿಲ್ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಪ್ರೊ.ರಾಜಶೇಖರ ಯರಗೋಳ, ಸಿವಿಲ್ ಮಹಿಳಾ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥೆ ಡಾ.ಶೀತಲ್ ಬಿರಾದಾರ, ಮೆಕಾನಿಕಲ್ ವಿಭಾಗದ ಮುಖ್ಯಸ್ಥ ಪ್ರೊ.ಶಿವಕುಮಾರ ರಾಚೋಟಿ, ಇಲೆಕ್ಟಿçಕಲ್ ವಿಭಾಗದ ಮುಖ್ಯಸ್ಥ ಪ್ರೊ.ಜಗದೀಶ ಪಾಟೀಲ್, ಇಲೆಕ್ಟಿçಕಲ್ ಮಹಿಳಾ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥೆ ಪ್ರೊ.ಸುಷ್ಮಾ ಪಾಟೀಲ್, ಆರ್ಕಿಟೆಕ್ಟ್ ವಿಭಾಗದ ಹಿರಿಯ ಉಪನ್ಯಾಸಕ ಡಾ.ಸುರೇಶ ಪಾಟೀಲ್ ಅವರು ಎಂಒಯುಗೆ ತಮ್ಮ ವಿಭಾಗಗಳ ಪರವಾಗಿ ಸಹಿ ಹಾಕಿದರು. ವಿವಿ ಡೀನ್ ಡಾ.ಲಕ್ಷಿö್ಮÃ ಪಾಟೀಲ್ ಮಾಕಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net