ಶಣವಿನಕುಪ್ಪೆ ಶಾಲೆಯಲ್ಲಿ ಮಂತ್ರಿಮಂಡಲ ರಚನೆ

IMG-20250620-WA0145
Published on

ಅರಕಲಗೂಡು: ತಾಲೂಕಿನ ಶಣವಿನಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ 2025-26 ನೇ ಸಾಲಿನ ಶಾಲಾ ವಿದ್ಯಾರ್ಥಿ ಯುವ ಸಂಸತ್ ಚುನಾವಣೆ ಜರುಗಿತು.

ವಿದ್ಯಾರ್ಥಿಗಳು ಚುನಾವಣೆಯಲ್ಲಿ ಮತಚಲಾಯಿಸಿ ಮಂತ್ರಿಮಂಡಲವನ್ನು ಆಯ್ಕೆ ಮಾಡಿದರು. ಹೆಚ್ಚು ಮತ ಪಡೆದು ಮುಖ್ಯಮಂತ್ರಿ ಸ್ಥಾನಕ್ಕೆ ರೋಹಿತ್, ಉಪಮುಖ್ಯಮಂತ್ರಿಯಾಗಿ ಸೃಜನಾ, ಶಿಕ್ಷಣ ಮಂತ್ರಿಯಾಗಿ ಅಂಬಿಕಾ, ಇನ್ನಿತರ ಮಂತ್ರಿಗಳಾಗಿ ಲಕ್ಷ್ಮೀ, ಸಮರ್ಥ, ಲವೀಶ್, ಶಿವಪ್ರಸಾದ್, ಚೇತನ್ ಆಯ್ಕೆಯಾದರು.

ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಗ್ರಾಪಂ ಸದಸ್ಯ ಸಂತೋಷ್, ಮುಖ್ಯ ಶಿಕ್ಷಕಿ ಯಾಸ್ಮಿನ್ ತಾಜ್, ಶಿಕ್ಷಕರಾದ ರೌಷನ್ ಅರಾ, ದಿವ್ಯಾಮಣಿ, ಸಾಗರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net