ವ್ಯಾಪಾರ ಬಹಳ ಕುಸಿದಿದೆ

bkt-13-2
Published on

ಬಾಗಲಕೋಟೆ: ಬಾಗಲಕೋಟೆ ನಗರದಲ್ಲಿ ಈ ಹಿಂದೆ ಇಲ್ಲಿನ ವ್ಯಾಪಾರಸ್ಥರಲ್ಲಿ ಕಾಣಿಸುತ್ತಿದ್ದ ದರ್ಪು, ಉತ್ಸಾಹ, ಹುಮ್ಮಸ್ಸು ಈಗ ಕಾಣಿಸುತ್ತಿಲ್ಲ. ಆಗ ಬೆಳೆಯಲು ಇಲ್ಲಿ ಸಾಕಷ್ಟು ಅವಕಾಶಗಳು ಇದ್ದವು. ಕಳೆದ ೫೦ ವರ್ಷಗಳಿಂದ ನಾನು ನಗರವನ್ನು ಗಮನಿಸುತ್ತಿದ್ದೇನೆ, ವ್ಯಾಪಾರ ಬಹಳ ಕುಸಿದಿದೆ ಎಂದು ವಿಆರ್‌ಎಲ್ ಸಮೂಹ ಸಂಸ್ಥೆಯ ಚೇರಮನ್, ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ಹೇಳಿದರು.

ನಗರದ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಭಾನುವಾರ ಬಾಗಲಕೋಟೆ ಯುನಿಯನ್ ಆ-ï ಮರ್ಚಂಟ್ಸ್ ಆ್ಯಂಡ್ ಎಂಟಪ್ರೆÊಸಸ್‌ಗೆ ಜ್ಯೋತಿ ಬೆಳೆಗಿಸಿ ಉದ್ಘಾಟಿಸಿ ಮಾತನಾಡಿದರು.

ಕಳೆದ ಏಳು ದಶಕಗಳಿಂದ ಗದಗ ನಿಂದ ಅಖಂಡ ವಿಜಯಪುರ ಸಂಪರ್ಕ ಇದೆ. ಬಾಗಲಕೋಟೆ ಜೊತೆಗೆ ನನಗೆ ನಂಟು ಇದೆ. ಆವತ್ತಿನ ವ್ಯಾಪಾರದ ಉತ್ಸಾಹ ಈಗ ಕಾಣಿಸುತ್ತಿಲ್ಲ. ಮುಳುಗಡೆ ಕಾರಣಕ್ಕೆ ಇಲ್ಲಿನ ವ್ಯಾಪಾರ ವಹಿವಾಟು ಕಡಿಮೆ ಆಗಿದೆ. ಇದಕ್ಕೆ ರಾಜಕೀಯ ಧುರಿಣರ ನಿಷ್ಕಾಳಜಿಯು ಇದೆ. ನಾವು ಕೈಕಟ್ಟಿ ಕುಳಿತಾಗ ಹೀಗೆಲ್ಲ ಆಗುತ್ತದೆ ಎಂದರು.

ದೇಶದಲ್ಲಿ ನಮ್ಮ ಸಂಸ್ಥೆಯ ೧೨೫೦ ಬ್ರ‍್ಯಾಂಚ್‌ಗಳು ಇವೆ. ಇವುಗಳ ಪೈಕಿ ಬಾಗಲಕೋಟೆ, ಗದಗ, ದಾಂಡೇಲಿ ಈ ಮೂರು ಬ್ರ‍್ಯಾಂಚ್‌ಗಳು ರಿವರ್ಸ್ಗೇರ್‌ನಲ್ಲಿ ಇದ್ದರೆ ಉಳಿದೆಲ್ಲವೂ ಪ್ರಗತಿಯಲ್ಲಿವೆ ಇವೆ ಎಂದು ಬಾಗಲಕೋಟೆ ವ್ಯಾಪಾರ-ವಹಿವಾಟು ಕುಸಿತದ ಪರಿಣಾಮವನ್ನು ತಿಳಿಸಿದರು.

ಬಾಗಲಕೋಟೆಗೆ ನಾಲ್ಕೆÊದು ವರ್ಷಕ್ಕೊಮ್ಮೆ ಇಲ್ಲಿನ ನನ್ನ ಸ್ನೇಹಿತರನ್ನು ಭೇಟಿ ಮಾಡುತ್ತೇನೆ. ನಾಲ್ಕು ತಿಂಗಳು ಹಿಂದೆ ನಗರಕ್ಕೆ ಬಂದಿದ್ದಾಗ ಇಲ್ಲಿನ ಮಾರುಕಟ್ಟೆಯಲ್ಲಿ ೧೫-೨೦ ಅಂಗಡಿಗಳಿಗೆ ಭೇಟಿ ಮಾಡಿದ್ದೆ. ಸಂಜೆ ೬ ಗಂಟೆ ಆಗಿದ್ದರೂ ಯಾವ ಅಂಗಡಿಗಳಲ್ಲೂ ಗಿರಾಕಿಗಳು ಕಾಣಿಸಲಿಲ್ಲ. ವ್ಯಾಪಾರಸ್ಥರು ಕೈ ಕಟ್ಟಿ ಕುಳಿತಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.

ಬಾಗಲಕೋಟೆ ನಗರದಲ್ಲಿ ೨೦೦ ಎಕರೆ ಜಾಗದಲ್ಲಿ ಒಂದೇ ಸೂರಿನಡಿಯಲ್ಲಿ ಮಾರುಕಟ್ಟೆ ನಿರ್ಮಾಣ ಆಗುವ ಬಗ್ಗೆ ಕೇಳಿದೆ. ಆದರೆ, ೨೦೦ ಎಕರೆಯಲ್ಲಿ ೧೦೦ ಎಕರೆ ರಸ್ತೆ ನಿರ್ಮಾಣಕ್ಕೆ ಹೋಗುತ್ತದೆ. ೫೦ ಎಕರೆ ಪಾರ್ಕಿಂಗ್‌ಗೆ ಹೋದರೆ ಉಳಿದ ೫೦ ಎಕರೆಯಲ್ಲಿ ಮಾರುಕಟ್ಟೆ ಚಿಕ್ಕದಾಗುತ್ತದೆ ಎನ್ನುವ ಪರಿಜ್ಞಾನ ನನಗೆ ಇದೆ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಜಾಗಕ್ಕೆ ಇಲ್ಲಿನ ವ್ಯಾಪಾರಸ್ಥರು ಒತ್ತಾಯ ಮಾಡಬೇಕು ಎಂದು ಸಲಹೆ ನೀಡಿದರು.

೧೯೯೬ರಲ್ಲಿ ಪಾರ್ಲಿಮೆಂಟ್‌ನಲ್ಲಿ ನನ್ನ ಜೊತೆಗೆ ಎಚ್.ವೈ.ಮೇಟಿ ಅವರು ಇದ್ದರು. ಈಗ ಅವರು ಬಾಗಲಕೋಟೆ ಶಾಸಕರಿದ್ದಾರೆ. ಅವರಿಗೆ ಮುಖ್ಯಮಂತ್ರಿಗಳ ಜೊತೆಗೆ ಉತ್ತಮ ಸಂಬAಧ ಇದ್ದು, ಅದರ ಸದುಪಯೋಗವನ್ನು ನೀವೆಲ್ಲ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಚಂಡಿಗಢವನ್ನು ಬಿಟ್ಟರೆ ದಕ್ಷಿಣ ಭಾರತದಲ್ಲಿ ಹೊಸ ಬಾಗಲಕೋಟೆ ಅತ್ಯಂತ ಅಚ್ಚುಕಟ್ಟಾದ ನಗರವಾಗಿದೆ. ಇಲ್ಲಿನ ಭೂಮಿಯ ಬೆಲೆ ಅಽಕವಾಗಿದೆ. ಇಲ್ಲಿ ವ್ಯಾಪಾರ, ಉದ್ಯಮ ಬೆಳೆಯದೇ ಹೋದರೆ ಮುಂದಿನ ದಿನಗಳು ಇನ್ನು ಕಷ್ಟಕರವಾಗಿರುತ್ತವೆ. ನಿಮ್ಮ ಮಕ್ಕಳು ಉದ್ಯೋಗಕ್ಕಾಗಿ ಊರು ಬಿಟ್ಟು ಹೋಗುತ್ತಾರೆ. ಈಗ ಹೋದವರು ತಮ್ಮ ನಿವೃತ್ತಿ ಬಳಿಕ ಬಾಗಲಕೋಟೆ ನಗರಕ್ಕೆ ಬರಬೇಕು, ಇಲ್ಲಿ ವ್ಯಾಪಾರ ಮಾಡಬೇಕು ಎನ್ನುತ್ತಿದ್ದಾರೆ. ಅದಕ್ಕೆ ಪೂರಕ ವಾತಾವರಣ ಇಲ್ಲಿ ನಿರ್ಮಾಣ ಆಗಬೇಕು ಎಂದರು.

ಚರ0ತಿಮಠದ ಪ್ರಭು ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರಭಾಕರ ಬೋಧಲೆ ಮಹಾರಾಜರು, ಉದ್ಯಮಿ ವಿಜಯ ನಿರಾಣಿ, ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿ.ಪ ಸದಸ್ಯ ಪಿ.ಎಚ್.ಪೂಜಾರ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶಟ್ಟಿ, ಸಂಘಟನೆ ಅಧ್ಯಕ್ಷ ರವಿ ಕುಮಟಗಿ, ವಿರೂಪಾಕ್ಷಿ ಅಮೃತಕರ, ಪವನ ಸಿಮಿಕೇರಿ, ಶ್ರೀನಿವಾಸ ಬಳ್ಳಾರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net