

ಬಾಗಲಕೋಟೆ: ವ್ಯಸನ ಮುಕ್ತ ದೇಶ ನಿರ್ಮಾಣಕ್ಕೆ ಯುವಶಕ್ತಿಯ ಅಗತ್ಯವಾಗಿದ್ದು, ಮಾದಕ ದ್ರವವ್ಯ ವ್ಯಸನ ಮುಕ್ತ ರಾಷ್ಟçವಾಗಿಸಲು ಪಣ ತೋಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ ರೆಡ್ಡಿ ಹೇಳಿದರು.
ನಗರದ ಬಿವಿವಿ ಸಂಘದ ಮೈದಾನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ ಹಾಗೂ ಬಿವಿವಿ ಸಂಘದ ವಿವಿಧ ಶಾಲಾ ಕಾಲೇಜುಗಳ ಸಹಯೋಗದಲ್ಲಿ ನಡೆದ ಅಂತರ ರಾಷ್ಟಿçÃಯ ಮಾದಕ ದ್ರವ್ಯ ವ್ಯಸನ ಮುಕ್ತ ದಿನದ ನಿಮಿತ್ತ ಹಮ್ಮಿಕೊಂಡ ಪ್ರತಿಜ್ಞಾವಿಽ ಸ್ವೀಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಪ್ರತಿ ವರ್ಷ ಜೂ.೨೬ ರಂದು ಅಂತರರಾಷ್ಟಿçÃಯ ಮಾದಕ ದ್ರವ್ಯ ವ್ಯಸನ ಮುಕ್ತದಿನ ಆಚರಿಸಲಾಗುತ್ತಿದ್ದು, ಜಿಲ್ಲೆಯಾದ್ಯಂತ ೩ ಸಾವಿರಕ್ಕೂ ಹೆಚ್ಚು ಶಾಲಾ, ಕಾಲೇಜು ೪ ಲಕ್ಷ ಮಕ್ಕಳಿಗೆ ಪ್ರತಿಜ್ಞಾವಿಽ ಬೋಧನೆ ಮಾಡುತ್ತಿದೆ. ಡ್ರಗ್ಸ್ ಕೊಲೆಗಿಂತ ಹೆಚ್ಚು ಹಿಂಸಾತ್ಮಕವಾಗಿದ್ದು, ಇದೊಂದು ಘೋರ ಅಪರಾಧ ಎಂದು ಪರಿಗಣಿಸಲಾಗಿದೆ. ದೇಶವನ್ನು ವ್ಯಸನಮುಕ್ತವನ್ನಾಗಿ ಮಾಡಬೇಕು. ಭಾರತ ಹಾಗೂ ರಾಜ್ಯ ಸರ್ಕಾರದ ಸಂಕಲ್ಪದAತೆ ಕಾರ್ಯೋನ್ಮೂರೋಗಣ ಎಂದರು.
ವಿದ್ಯಾರ್ಥಿಗಳು ಈ ದೇಶದ ಮುಂದಿನ ಭದ್ರ ಬುನಾದಿಯಾಗಿದ್ದು, ವಿದ್ಯಾರ್ಥಿಗಳಲ್ಲಿಯೇ ಸಂಕಲ್ಪ ಮಾಡಿಸುವ ಮೂಲಕ ದೇಶವನ್ನು ಭದ್ರಗೊಳಿಸೋಣ, ಜಿಲ್ಲೆಯಲ್ಲಿ ಎಐ ಮುಖಾಂತರ ಹೊಸ ಟ್ರಾಫಿಕ್ ನಿಯಮಗಳನ್ನು ಜಾರಿಗೆ ತರುತ್ತಿದ್ದು, ಅವುಗಳನ್ನು ತಾವು ಪಾಲಿಸುವುದರ ಜೋತಗೆ ತಮ್ಮ ಪಾಲಕರಿಗೂ ತಿಳಿಸಿ ಜೊತೆಗೆ ಬಾಲ್ಯ ವಿವಾಹದ ಬಗ್ಗೆ ಜಾಗೃತಿ ಮೂಡಿಸಬೇಕು. ಮುಂದಿನ ವರ್ಷಗಳಲ್ಲಿ ಮಹಿಳೆಯರೇ ಭಾರತವನ್ನು ಮುನ್ನೆಡೆಸುವರು ಎಂದರು.
ಡಿವೈಎಸ್ಪಿ ಗಜಾನನ ಸುತಾರ ಪ್ರತಿಜ್ಞಾವಿಽ ಬೋಸಿದರು. ೫ ಸಾವಿರ ವಿದ್ಯಾಥಿಗಳು ಪ್ರತಿಜ್ಞಾವಿಽಯಲ್ಲಿ ಮಾದಕ ದ್ರವ್ಯ ವ್ಯಸನ ಮುಕ್ತ ರಾಷ್ಟç ನಿರ್ಮಾಣ ಮಾಡಲು ನಾವು ಗಾಂಜಾ, ಅಫೀಮುದಂತಹ ಮಾದಕ ದ್ರವ್ಯಗಳನ್ನು ಸೇವಿಸುವುದಿಲ್ಲ. ಇತರರು ಸೇವಿಸದಂತೆ ಶ್ರಮಿಸುತ್ತೇವೆ ಎಂದು, ಅಕ್ರಮ ಮಾದಕ ದ್ರವ್ಯಗಳ ಬಗ್ಗೆ ಮಾಹಿತಿ ಬಂದಲ್ಲಿ ಪೊಲೀಸ್ ಸಹಾಯವಾಣಿ ೧೧೨ ಗೆ ಕರೆ ಮಾಡುವ ಮೂಲಕ ಮಾದಕ ದ್ರವ್ಯ ವ್ಯಸನ ಮುಕ್ತ ರಾಷ್ಟçವನ್ನಾಗಿ ಮಾಡಲು ಪಣತೊಡುತ್ತೇವೆ ಎಂದು ಪ್ರತಿಜ್ಞಾ ವಿಽ ಬೋಽಸಲಾಯಿತು.
ಕಾರ್ಯಕ್ರಮದಲ್ಲಿ ಬಾಗಲಕೋಟೆ ನಗರದ ಸಿಪಿಐ ಗುರುನಾಥ ಚವ್ಹಾಣ, ಬಿವಿವಿ ಬಿಎಚ್‌ಆರ್‌ಡಿ ನಿರ್ದೇಶಕ ಸಿದ್ದರಾಮ ಮನಹಳ್ಳಿ, ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಆರ್. ಮುಗನೂರಮಠ ಸ್ವಾಗತಿಸಿದರು, ವಾಣಿಜ್ಯ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಜಗನ್ನಾಥ ಚವ್ಹಾಣ ವಂದಿಸಿದರು. ಡಾ. ಎಸ್.ಡಿ ಕೆಂಗಲಗುತ್ತಿ ನಿರೂಪಿಸಿದರು. ಅಕ್ಕಮಹಾದೇವಿ ಮಹಿಳಾ ಕಾಲೇಜು, ವಿಜ್ಞಾನ ಮಹಾವಿದ್ಯಾಲಯ, ಪಿಯು ಕಾಲೇಜು, ಪ್ರೌಡ ಹಾಗೂ ಪ್ರಾಥಮಿಕ ಶಾಲೆಗಳ ಪ್ರಾಚಾರ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.