

ಬಾಗಲಕೋಟೆ: ರಾಷ್ಟ್ರೀಯ ಸೇವಾ ಯೋಜನೆ ವ್ಯಕ್ತಿತ್ವ ವಿಕಾಸನಕ್ಕೆ ಬುನಾದಿಯಾಗಿದ್ದು, ನಾಯಕತ್ವ ಗುಣ ಬೆಳೆಸುವ ಶಿಬಿರವಾಗಿದೆ ಎಂದು ವಿಶ್ರಾಂತ ಪ್ರಾಚಾರ್ಯ ಡಾ.ಬಿ.ಆರ್.ಪಾಟೀಲ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ ೧ ಮತ್ತು ೨ ರ ವತಿಯಿಂದ ದತ್ತು ಗ್ರಾಮವಾದ ಮುಚಖಂಡಿಯಲ್ಲಿ ಆಯೋಜಿಸಿರುವ ವಾರ್ಷಿಕ ವಿಶೇಷÀ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾಯಕತ್ವ ಗುಣ ಬೆಳೆಸಿ ಸಾಮಾಜಿಕ ಕಳಕಳಿ ಕಲ್ಪಿಸುವ ಹಾಗೂ ಯುವಶಕ್ತಿ ಬೆಳವಣಿಗೆ ಗುರಿ ಸಾಽಸುವಲ್ಲಿ ಇಂತಹ ಶಿಬಿರಗಳು ಪ್ರೇರಕವಾಗಿವೆ. ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಇದೊಂದು ಅಡಿಪಾಯವಾಗಿದೆ. ಶಿಬಿರಾರ್ಥಿಗಳು ವ್ಯಕ್ತಿತ್ವ ವಿಕಾಸವನ್ನುಹೊಂದಿ,ಇಡೀ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಎಸ್. ಎಂ. ಗಾಂವಕರ್ ಮಾತನಾಡಿ, ಇದೊಂದು ಸಾಮಾಜಿಕ ನಾಯಕತ್ವ ಬೆಳವಣಿಗೆ ಜೊತೆಗೆ ವೈಯಕ್ತಿಕವಾಗಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಇದೊಂದು ವೇದಿಕೆಯಾಗಿದೆ. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ನಿವೆಲ್ಲಾ ಭಾಗಿಯಾಗಿರುವುದು ಒಂದು ಸೌಭಾಗ್ಯ ಎಂದರೆ ತಪ್ಪಾಗಲಾರದು ಎಂದು ಹೇಳಿದರು.
ಡಾ.ಎನ್.ಎಚ್.ಬೇವಿನಹಳ್ಳಿ, ಪದವಿ ಪೂರ್ವ ಪ್ರಾಚಾರ್ಯ ಡಾ.ಡಿ.ಎಸ್.ಲಮಾಣಿ, ಐಕ್ಯೂಎಸಿ ಸಂಯೋಜಕ ರಾಷ್ಟ್ರೀಯ ಸೇವಾ ಯೋಜನೆ ಘಟಕ ೧ರ ಕಾರ್ಯಕ್ರಮಾಽಕಾರಿ ಶಿವಾನಂದ ಶಿವನಗುತ್ತಿ, ಘಟಕ-೨ರ ಕಾರ್ಯಕ್ರಮಾಽಕಾರಿ ಶ್ರೀಕಾಂತ ಬಸವನಾಳ, ಶಿಬಿರಾಽಕರಿ ಎಸ್. ಕೆ. ಜಾಗೀರದಾರ, ಲಕ್ಷಿ÷್ಮÃ ಮುತ್ತಪ್ಪನವರ ಉಪಸ್ಥಿತರಿದ್ದರು.