ವ್ಯಕ್ತಿತ್ವ ವಿಕಸನಕ್ಕೆ ಕೌಶಲಗಳು ಅಗತ್ಯ

bkt-23-3
ಬಾಗಲಕೋಟೆ ನಗರದ ಬಸವೇಶ್ವರ ಸಹಕಾರಿ ಬ್ಯಾಂಕ್ ಸಭಾಭವಭವನದಲ್ಲಿ ಶುಕ್ರವಾರ ಬಸವೇಶ್ವರ ಸಹಕಾರಿ ಬ್ಯಾಂಕ್, ಕರ್ನಾಟಕ ಸರ್ಕಾರದ ಸಿಡಾಕ್ ಸಂಸ್ಥೆ ಹಮ್ಮಿಕೊಂಡಿದ್ದ ೧೦ ದಿನಗಳ ಕಾಲ ಮಹಿಳೆಯರು ಹಾಗೂ ಪುರುಷರಿಗೆ ಕೌಶಲ ಅಭಿವೃದ್ಧಿ ಉದ್ಯಮಶೀಲತಾ ತರಬೇತಿ ಶಿಬಿರ ಸಮಾರಂಭದಲ್ಲಿ ಸಿಡಾಕ್ ಅಽಕಾರಿ ಸುಪ್ರೀತಾ ಬಳ್ಳಾರಿ ಮಾತನಾಡಿದರು.
Published on

ಬಾಗಲಕೋಟೆ: ಸಮೂಹ ಸಂವಹನ ಮಾರುಕಟ್ಟೆ ವ್ಯವಸ್ಥೆ, ವ್ಯಕ್ತಿತ್ವ ವಿಕಸನಕ್ಕೆ ಕೌಶಲ ತರಬೇತಿಗಳು ಬಹಳಷ್ಟು ಮಹತ್ವದಾಗಿದೆ. ಮಾರುಕಟ್ಟೆ ಬಗ್ಗೆ ನಿತ್ಯವು ಸಂಪರ್ಕದಲ್ಲಿರಬೇಕು ಎಂದು ಸಿಡಾಕ್ ಅಽಕಾರಿ ಸುಪ್ರೀತಾ ಬಳ್ಳಾರಿ ಹೇಳಿದರು.

ನಗರದ ಬಸವೇಶ್ವರ ಸಹಕಾರಿ ಬ್ಯಾಂಕ್ ಸಭಾಭವಭವನದಲ್ಲಿ ಶುಕ್ರವಾರ ಬಸವೇಶ್ವರ ಸಹಕಾರಿ ಬ್ಯಾಂಕ್, ಕರ್ನಾಟಕ ಸರ್ಕಾರದ ಸಿಡಾಕ್ ಸಂಸ್ಥೆ ಹಮ್ಮಿಕೊಂಡಿದ್ದ ೧೦ ದಿನಗಳ ಕಾಲ ಮಹಿಳೆಯರು ಹಾಗೂ ಪುರುಷರಿಗೆ ಕೌಶಲ ಅಭಿವೃದ್ಧಿ ಉದ್ಯಮಶೀಲತಾ ತರಬೇತಿ ಶಿಬಿರ ಸಮಾರಂಭದಲ್ಲಿ ಅವರು ಮಾತನಾಡಿದರು.

ಜೀವನದಲ್ಲಿ ಕೈಗಾರಿಕೆಗಳನ್ನು ಅಳವಡಿಸಿಕೊಂಡು. ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಿರಿ ಎಂದರು.

ಕರ್ನಾಟಕ ಕೌಶಲ ನಿಗಮದ ಅಽಕಾರಿ ಗುರುಪಾದಯ್ಯ ಹಿರೇಮಠ ಮಾತನಾಡಿ, ಕೌಶಲ ತರಬೇತಿ ಶಿಬಿರದ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಽಕಾರಿ ವಿವೇಕಾನಂದ ಕೇಮಾಳಿ, ಆಡಳಿತಾಽಕಾರಿ ಬಿ.ಎಸ್. ನಾವಲಗಿ,ಬ್ಯಾಂಕಿನ ಅಽಕಾರಿಗಳಾದ ಎಸ್.ಬಿ.ಬದಾಮಿ. ಎಂ.ಎಸ್. ಗುಡಗುಂಟಿ. ವಿ.ಎಂ.ಹಿರೇಮಠ, ಎಸ್.ಎಚ್.ಕುರ್ತಕೋಟಿ, ಜ್ಯೋತಿ ನಾವಲಗಿ, ಅರವಿಂದ ಯಲಿಗಾರ ಉಪಸ್ಥಿತರಿದ್ದರು. ಶಾಂತಯ್ಯ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net