

ಬಾಗಲಕೋಟೆ: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮಾದರಿ ನೀತಿ ಸಂಹಿತೆ ಹಿನ್ನಲೆಯಲ್ಲಿ ಪೆಟ್ರೋಲ್ ಬಂಕ್, ವೈನ್‌ಶಾಪ್, ಮೆಡಿಕಲ್ ಸ್ಟೊರ‍್ಸ್ ಮತ್ತು ಮೆಡಿಕಲ್ ಏಜೆನ್ಸಿಗಳಲ್ಲಿ ವ್ಯವಹಾರ ನಡೆಸಿ ಪ್ರತಿದಿನ ವ್ಯವಹಾರದಿಂದ ಸಂಗ್ರಹವಾದ ಮೊತ್ತವನ್ನು ಬ್ಯಾಂಕಿಗೆ ಜಮೆ ಮಾಡಲು ಹಾಗೂ ಮನೆಗೆ ತೆಗೆದುಕೊಂಡು ಹೋಗಲು ಕೆಲವೊಂದು ಷರತ್ತುಗಳೊಂದಿಗೆ ಅನುಮತಿ ನೀಡಿ ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ಚುನಾವನಾಧಿಕಾರಿ ಜಾನಕಿ ಕೆ.ಎಂ ಆದೇಶ ಹೊರಡಿಸಿದ್ದಾರೆ.
ಪ್ರತಿ ದಿನ ವ್ಯವಹಾರ ಮಾಡಿ ಬಂದ ಹಣವನ್ನು ತಮ್ಮ ವಾಹನದಲ್ಲಿ ಅಥವಾ ಕೈಯಲ್ಲಿ ತೆಗೆದುಕೊಂಡು ಸಾಗಿಸುವ ಸಂದರ್ಭದಲ್ಲಿ ಸೂಕ್ತ ರಸೀದಿ ಮತ್ತು ಶೇಖರಣೆಯಾದ ಹಣದ ವಿವರ ಹಾಗೂ ಪೆಟ್ರೋಲ್ ಬಂಕ್, ವೈನ್‌ಶಾಪ್, ಮೆಡಿಕಲ್ ಸ್ಟೊರ‍್ಸ್ ಮತ್ತು ಮೆಡಿಕಲ್ ಏಜೆನ್ಸಿಯವರು ಸಂಬAದಪಟ್ಟ ದಾಖಲೆಗಳನ್ನು ಇಟ್ಟುಕೊಂಡಿರಬೇಕು. ತಪಾಸಣೆ ಸಂದರ್ಭದಲ್ಲಿ ತಪಾಸಣಾಧಿಕಾರಿಗಳು ಕೇಳುವ ದಾಖಲೆಗಳನ್ನು ಒದಗಿಸಬೇಕು. ಪ್ರತಿದಿನ ಸಂಗ್ರಹವಾದ ಹಣದ ವಿವರವನ್ನು ಸಂಬAಧಪಟ್ಟ ತಾಲೂಕಿನ ತಹಶೀಲ್ದಾರ ಕಾರ್ಯಾಲಯಕ್ಕೆ ತಿಳಿಸಬೇಕು ಎಂಬ ಷರತ್ತಿಗೆ ಒಳಪಟ್ಟು ಆದೇಶ ಹೊರಡಿಸಿದ್ದಾರೆ.