ವೈದ್ಯ ವಿದ್ಯಾರ್ಥಿನಿಗೆ ಸನ್ಮಾನ

04 oct tnp 02
Published on

ತಿ.ನರಸೀಪುರ: ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ವ್ಯಾಸಂಗಕ್ಕೆ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಪದವಿಗೆ ಪ್ರವೇಶಾತಿ ಪಡೆದ ಪ್ರತಿಭಾವಂತ ವಿದ್ಯಾರ್ಥಿನಿ ಹರಿಪ್ರಿಯಾ ನಾಯಕ್ ಅವರನ್ನು ಪಟ್ಟಣದ ಆಲಗೂಡು ನಿವಾಸದಲ್ಲಿ ಇತ್ತೀಚೆಗೆ ಮೈಸೂರು ಜಿಲ್ಲಾ ವಾಲ್ಮೀಕಿ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.

ಗ್ರಾಮಾಂತರ ಪ್ರದೇಶದ ಮಧ್ಯಮವರ್ಗ ಕುಟುಂಬದ ಹಿನ್ನೆಲೆಯಿಂದ ವಿದ್ಯಾಭ್ಯಾಸ ಪಡೆಯುತ್ತಿರುವ ಹರಿಪ್ರಿಯಾ ನಾಯಕ್ ರಷ್ಯಾದ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ(ಎಂಬಿಬಿಎಸ್) ಪದವಿ ಅಧ್ಯಯನಕ್ಕೆ ಅವಕಾಶ ಪಡೆದಿದ್ದು ಹೆಮ್ಮೆಯ ಸಂಗತಿಯಾಗಿರುವುದರಿಂದ ಅವರ ನಿವಾಸದಲ್ಲಿ ಪಾಲಕರ ಸಮ್ಮುಖದಲ್ಲಿ ಆಕೆಯನ್ನು ಸನ್ಮಾನಿಸಲಾಯಿತು.

ಒಕ್ಕೂಟದ ಜಿಲ್ಲಾಧ್ಯಕ್ಷ ತಾಯೂರು ಪ್ರಕಾಶ್ ಮಾತನಾಡಿ, ರಾಚಪ್ಪಾಜಿ ಮತ್ತು ರಾಜೇಶ್ವರಿ ದಪಂತಿಯ ಮಗಳಾದ ಹರಿಪ್ರಿಯಾ ನಾಯಕ್ ಅವರು ತಮ್ಮ ಪರಿಶ್ರಮ, ತಾಳ್ಮೆ ಮತ್ತು ನಿರಂತರ ಅಧ್ಯಯನದಿಂದ ನೀಟ್ ಪರೀಕ್ಷೆ ಮತ್ತು ವಿದೇಶಿ ಅಧ್ಯಯನಕ್ಕೆ ನಡೆಸುವ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಿದೆ. ಪ್ರತಿಭಾನ್ವಿತ ವಿದ್ಯಾರ್ಥಿನಿಯ ಸಾಧನೆ ಸಮುದಾಯಕ್ಕೆ ಪ್ರೇರಣೆಯಾದಂತಾಗಿದೆ ಅವರು ವೈದ್ಯಕೀಯ ಶಿಕ್ಷಣ ಪಡೆದು ಸಮಾಜ ಹಾಗೂ ದೇಶಕ್ಕೆ ಸೇವೆ ಸಲ್ಲಿಸಲಿ ಎಂದು ಆಶಿಸಿದರು.

ವಿದ್ಯಾರ್ಥಿನಿಯ ಪಾಲಕರು ಸೇರಿದಂತೆ ಶ್ರೀಮಹರ್ಷಿ ವಾಲ್ಮೀಕಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಯಡದೊರೆ ಮಹೇಶ್ ನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net