ವೈಜ್ಞಾನಿಕ ಕೃಷಿಯಿಂದ ಲಾಭ ಸಾಧ್ಯ

9KWR6
Published on

ವಿಜಯವಾಣಿ ಸುದ್ದಿಜಾಲ ಕಾರವಾರ
ಕೃಷಿಯಲ್ಲಿ ದೇಶ ಇಂದು ಸ್ವಾವಲಂಬಿಯಾಗಿದ್ದು, ರೈತರು ಸ್ವಾವಲಂಬಿ ಆಗಬೇಕಿದೆ. ವೈಜ್ಞಾನಿಕವಾಗಿ ಕೃಷಿ ಮಾಡಿದರೆ ನಿಶ್ಚಿತವಾಗಿ ಲಾಭ ಸಾದ್ಯ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಬನವಾಸಿ ಸಮೀಪದ ಅಂಡಗಿ ಗ್ರಾಮದಲ್ಲಿ ಕೋಲ್ಡ್ ಸ್ಟೋರೇಜ್ ಘಟಕ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು. ರೈತರ ಸ್ವಾವಲಂಬನೆಗಾಗಿ ಸರ್ಕಾರ ಸಹಾಯಧನ, ಡೀಸೆಲ್ ಸಬ್ಸಿಡಿ ವಿತರಣೆ ಮಾಡುತ್ತಿದೆ. ಅವುಗಳನ್ನು ಉಪಯೋಗಿಸಿಕೊಂಡು ಬೆಳೆ ಬೆಳೆದು, ಅವುಗಳ ಸಂಸ್ಕರಣೆಗೂ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು. ಈಗ ನಿರ್ಮಿಸುತ್ತಿರುವ ಕೋಲ್ಡ್ ಸ್ಟೋರೇಜ್‌ನಿಂದ ಸಾವಿರಾರು ರೈತರಿಗೆ ಅನುಕೂಲವಾಗಲಿದೆ. ಅನಾನಾಸ್, ಶುಂಠಿ, ಬಾಳೆ ಬೆಳೆಗಳನ್ನು ಇಡಬಹುದು. ಬೆಲೆ ಬಂದಾಗ ಅದನ್ನು ಮಾರಾಟ ಮಾಡಬಹುದು ಎಂದು ಸಲಹೆ ನೀಡಿದರು.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ರೈತರ ಬೇಡಿಕೆಯಂತೆ 9.5 ಕೋಟಿ ವೆಚ್ಚದಲ್ಲಿ 2500 ಮೆಟ್ರಿಕ್ ಟನ್ ಸಂಗ್ರಹಣಾ ಸಾಮರ್ಥ್ಯವಿರುವ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎನ್.ಭಟ್ಟ, ಪ್ರಮುಖರಾದ ದ್ಯಾಮಣ್ಣ ದೊಡ್ಮನಿ, ಶಿವಕುಮಾರ ಗೌಡ, ಮಲ್ಲಸರ್ಜನ್, ಮಂಗಲಾ ನಾಯ್ಕ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಪಿ.ಸತೀಶ, ಕೆವಿಕೆ ಮುಖ್ಯಸ್ಥ ಮಂಜು ಎಂ.ಜೆ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ, ಟಿ.ಎಚ್.ನಟರಾಜ ಇತರರಿದ್ದರು. ಎಪಿಎಂಸಿ ಅಧ್ಯಕ್ಷ ಪ್ರಶಾಂತ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.


ಕೃಷಿ ಇಲಾಖೆಗೆ ಹೊರಗುತ್ತಿಗೆ ಮೇಲೆ 6 ಸಾವಿರ ಜನರ ಭರ್ತಿ
ಕೃಷಿ ಇಲಾಖೆಯಲ್ಲಿ ಶೇ.55ರಷ್ಟು ಸಿಬ್ಬಂದಿ ಕೊರತೆಯಿದೆ. ಕೆಪಿಎಸ್‌ಸಿ ಮೂಲಕ ಸದ್ಯ ಸಿಬ್ಬಂದಿ ನೇಮಕದ ಕಾಲ್‌ಫಾರ್ ಆಗುತ್ತದೆ. ಡಿಪ್ಲೊಮಾ ಮುಗಿಸಿದ 6000 ಜನರನ್ನು ಹೊರಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲು ಆರ್ಥಿಕ ಇಲಾಖೆ ಹಾಗೂ ಮುಖ್ಯಮಂತ್ರಿಗಳಲ್ಲಿ ಅನುಮತಿ ಕೇಳಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net