ವೇಸ್ಟ್ ಕೋಸ್ಟ್ ಪೇಪರ್ ಮಿಲ್ ಬಂದ್

27 dnd1
Published on

ದಾಂಡೇಲಿ: ವೇಸ್ಟ್ ಕೋಸ್ಟ್ ಪೇಪರ್ ಮಿಲ್ ಅನ್ನು ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್ ಅವರ ಆದೇಶದಂತೆ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಕಾರ್ಖಾನೆಯ ದ್ವಾರವನ್ನು ಮುಂದಿನ ಆದೇಶದವರೆಗೆ ಬಂದ್ ಮಾಡಲಾಗಿದೆ. ಅತಿ ಅವಶ್ಯ ಸೇವೆಗಾಗಿ ಕೇವಲ 40 ರಿಂದ 50 ಕಾರ್ವಿುಕರನ್ನು ಕಾರ್ಖಾನೆ ಒಳಗೆ ಬಿಡಲಾಗುತ್ತಿದೆ. 1958 ರಲ್ಲಿ ಆರಂಭಗೊಂಡ ಈ ಕಾರ್ಖಾನೆಯ ಎಲ್ಲ ಪ್ರವೇಶ ದ್ವಾರಗಳನ್ನು ಬಂದು ಮಾಡಿದ್ದು ಇದೆ ಮೊದಲಬಾರಿಗೆ.

ಪತ್ರಿಕೆ ವಿತರಣೆಗೆ ನಿರ್ಬಂಧವಿಲ್ಲ: ಓದುಗರು ಎಂದಿನಂತೆ ಪತ್ರಿಕೆಯನ್ನು ಯಾವುದೆ ಆತಂಕವಿಲ್ಲದೆ ಮನೆ ಬಾಗಿಲಗೆ ಬರಲಿದೆ. ಪತ್ರಿಕೆ ವಿತರಿಸುವವರಿಗೆ ಪ್ರತ್ಯೇಕವಾದ ಹಳದಿ ಬಣ್ಣದ ಗುರತಿನ ಚೀಟಿ ನೀಡಲಾಗುವುದು. ನಗರಸಭೆಯಿಂದ ವರ್ತಕರ ಸಹಾಯದಿಂದ ಅವಶ್ಯಕ ಕಿರಾಣಿ ವಸ್ತುಗಳನ್ನು ಎರಡು ಅಥವಾ ಮೂರು ವಾಹನಗಳಲ್ಲಿ ಹಾಗೂ ತರಕಾರಿ ವಿತರಣೆಯನ್ನು ಎರಡು ಅಥವಾ ಮೂರು ಕೈಗಾಡಿಯಲ್ಲಿ ಪ್ರತಿ ವಾರ್ಡ್​ಗಳಲ್ಲಿ ವಿತರಿಸುವ ವ್ಯವಸ್ಥೆಯನ್ನು ಆರಂಭಿಸಲಾಗಿದೆ ಎಂದು ನಗರಸಭೆಯ ಪೌರಾಯುಕ್ತ ಡಾ. ಸೈಯದ್ ಜಾಹೇದ್​ಅಲಿ, ತಹಸೀಲ್ದಾರ್ ಶೈಲೇಶ ಪರಮಾನಂದ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net