ವೆಜ್ಞಾನಿಕ ಮನೋಭಾವ ಬೆಳೆಯಲಿ

Sinchana
Published on

ಕಲಬುರಗಿ: ನಾಡಿನ ಪ್ರತಿಯೊಬ್ಬರಲ್ಲೂ ವೆಜ್ಞಾನಿಕ ಮನೋಭಾವ ಬೆಳೆಯಬೇಕು ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಅಹ್ಮದ್ ಹಗರೆ ಅಭಿಪ್ರಾಯಪಟ್ಟರು.
ನಗರದ ಜ್ಞಾನ ಸಿಂಚನ ಪದವಿಪೂರ್ವ ಕಾಲೇಜಿನಲ್ಲಿ ಭಾರತೀಯ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ರಾಷ್ಟಿಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ ನಿಮಿತ್ತ ಭಾನುವಾರ ಆಯೋಜಿಸಿದ್ದ ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವ-ಪ್ರಸ್ತುತ ಸವಾಲಗಳು ಎಂಬ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದರು.
ದೃಷ್ಟಿ ಬದಲಾದರೆ ಸೃಷ್ಟಿ ಬದಲಾಗುತ್ತದೆ. ಯಾವ ದೃಷ್ಟಿ ಬದಲಾಗಬೇಕು ಎಂಬುದನ್ನು ಅರಿಯಬೇಕು. ವಿe್ಞÁನ ಬೆಳೆದಂತೆ ವೈಚಾರಿಕ ಕ್ರಾಂತಿ ಉದಯಿಸಲು ಸಾದ್ಯ. ಹಕ್ಕುಗಳ ಬಗ್ಗೆ ಹೋರಾಟ ಮಾಡುತ್ತೇವೆ ಆದರೆ ಕರ್ತವ್ಯ ನಿರ್ವಹಣೆಯಲ್ಲಿ ನಾವು ವಿಫಲರಾಗಿz್ದೆÃವೆ. ಹಕ್ಕು ಪಡೆದು ಕರ್ತವ್ಯ ನಿಭಾಯಿಸಿದಾಗ ಭವ್ಯ ಭಾರತ ನಿರ್ಮಾಣವಾಗಲು ಸಾದ್ಯ ಎಂದರು.
ಮೌಢ್ಯ ಆಚರಣೆ ಎಂದರೆ ಧರ್ಮದ ಬಗ್ಗೆ ಗೊಂದಲ ಎಂದು ತಿಳಿದುಕೊಳ್ಳುತ್ತೇವೆ. ವಾಸ್ತವವಾಗಿ ಧರ್ಮ ವಿರೋಧಿ ಕಾಯಿದೆ ಅಲ್ಲ. ಭಾರತದಲ್ಲಿ ಜನಿಸಿದ ಪ್ರತಿ ಜೀವಿಗೂ ಬದುಕುವ ಹಕ್ಕಿದೆ. ಪ್ರತಿಯೊಬ್ಬ ನಾಗರಿಕನಿಗೂ ಘನತೆ, ಗೌರವದಿಂದ ಜೀವಿಸುವ ಹಕ್ಕಿದೆ. ಇದಕ್ಕೆ ಯಾವುದೇ ರೀತಿ ಅಡ್ಡಿಪಡಿಸುವಂತಿಲ್ಲ ಎಂಬುದು ಸಂವಿಧಾನ ಸ್ಪಷ್ಟವಾಗಿ ನಿರೂಪಿಸಿದೆ. ಮನುಷ್ಯರನ್ನು ಘಾಸಿಗೊಳಿಸುವ ಪದ್ಧತಿ ಸಂವಿಧಾನ ವಿರೋಧಿಸುತ್ತದೆ ಎಂದು ಹೇಳಿದರು.
ಮೂಢ ನಂಬಿಕೆ ಕುರಿತು ಜಾಗೃತಿ ಮೂಡಿಸಲು ಸರ್ಕಾರ ಮುಂದಾಗಬೇಕು. ಭಾರತವನ್ನು ವೈಜ್ಞಾನಿಕವಾಗಿ ಸದೃಢಗೊಳಿಸುವುದು ಅಗತ್ಯ. ಧರ್ಮ, ಜಾತಿ ಪದ್ಧತಿ ಹಾಗೂ ಅನಕ್ಷರತೆ ಸಮಸ್ಯೆಯಿಂದ ವೈಜ್ಞಾನಿಕ ಮನೋವೃತ್ತಿ ಬೆಳೆಯುತ್ತಿಲ್ಲ ಎಂದು ಪ್ರತಿಪಾದಿಸಿದರು.
ವಿಜ್ಞಾನ ಮತ್ತು ಧರ್ಮ ಒಂದೇ ವೇದಿಕೆಯಡಿ ನೋಡುವ ದೃಷ್ಟಿ ಬದಲಾಗಬೇಕು. ಮಾಧ್ಯಮಗಳಲ್ಲಿ ಮೂಢ ನಂಬಿಕೆಯನ್ನು ಪ್ರಜ್ಞಾಪೂರ್ವಕ ಬಿತ್ತರಿಸಲಾಗುತ್ತಿದೆ ಎಂದು ವಿಷಾದಿಸಿದರು.
ಬಿಜಿವಿಎಸ್ ಕಾರ್ಯದರ್ಶಿ ಶುಭಂಕರ್ ಚಕ್ರವರ್ತಿ, ಡಿಡಿಪಿಯು ಉಪ ನಿರ್ದೇಶಕ ಶಿವಶರಣಪ್ಪ ಮುಳೆಗಾಂವ್, ಡಿಡಿಪಿಐ ಸಕ್ರೆಪ್ಪಗೌಡ ಜಿ.ಬಿರಾದಾರ್, ಪ್ರಾಂಶುಪಾಲ ಎಚ್.ಸಿ.ಪಾಟೀಲï, ರಾಜಶೇಖರ, ಡಾ.ಪ್ರಭು ಖಾನಾಪುರೆ, ಡಾ.ಶಾಂತಾ ಮಠ್, ಡಾ.ಅರುಣಕುಮಾರ ಪಾಟೀಲ್, ಡಾ.ಪ್ರಕಾಶ ರಾಠೋಡ್, ಡಾ.ರಮೇಶ ಜಾನಕರ್, ಗಣಪತಿ ಕೋಡ್ಲೆ, ರವೀಂದ್ರ ರುದ್ರವಾಡಿ, ಡಾ.ಅಶೋಕ ಶೆಟಗಾರ, ಪ್ರಭಾಕರ ಸಲಗರೆ, ಡಾ.ಜಗನ್ನಾಥ ಡಾಂಗೆ, ಡಾ.ಸುರೇಖಾ ಡಾಂಗೆ, ನಿಂಗಪ್ಪ ಮಂಗೋಡಿ, ರವಿಚಂದ್ರ ಅತನೂರ, ಸಂಗೀತಾ ವರ್ಣೀಕರ್ ಇದ್ದರು. ಬಿಜಿವಿಎಸ್ ಗೌರವಾಧ್ಯಕ್ಷ ಡಾ.ಶ್ರೀಶೈಲ್ ಘೂಳಿ ಅಧ್ಯಕ್ಷತೆ ವಹಿಸಿದ್ದರು. ನಾಗೇಂದ್ರಪ್ಪ ಅವರಾದ್ ಪ್ರಾಸ್ತಾವಿಕ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net