

ಬಾಗಲಕೋಟೆ: ನಗರದ ಶಂಕ್ರಪ್ಪ ಸಕ್ರಿ ಹೈಸ್ಕೂಲ್ ಮೈದಾನದಲ್ಲಿ ಮೂರು ದಿನಗಳ ಕಾಲ ಜರುಗಿದ ವಿಪ್ರ ಕ್ರಿಕೆಟ್ ಕಪ್‌ಗೆ ಸೋಮವಾರ ತೆರೆಬಿದ್ದಿದೆ. ವೆಂಕಟಪೇಟೆ ವಿಜಯಧ್ವಜ ತಂಡ ಈ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ನವನಗರ ಯುನೈಟೆಡ್ ತಂಡ ರನ್ನರ್‌ಅಪ್ ಆಗಿ ತೃಪ್ತಿಪಟ್ಟುಕೊಂಡಿದೆ.
ಮೂರು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ೧೦ ತಂಡಗಳು ಭಾಗಿಯಾಗಿದ್ದವು, ಜಿಲ್ಲಾ ಕೇಂದ್ರ ಬಾಗಲಕೋಟೆ ಮಾತ್ರವಲ್ಲದೇ ಹುನಗುಂದ, ತೇರದಾಳ, ಜಮಖಂಡಿ ತಂಡಗಳು ಭಾಗಿಯಾಗಿ ಅತ್ಯುತ್ತಮ ಪ್ರದರ್ಶನ ನೀಡಿದವು. ಸೋಮವಾರ ಸಂಜೆ ನಡೆದ ಅಂತಿಮ ಸುತ್ತಿನ ಪಂದ್ಯಾವಳಿ ವೆಂಕಟಪೇಟೆ ವಿಜಯಧ್ವಜ-ನವನಗರ ಯುನೈಟೆಡ್ ತಂಡಗಳ ಮಧ್ಯೆ ಜರುಗಿತು. ಮೊದಲ ಬ್ಯಾಟಿಂಗ್ ಮಾಡಿದ್ದ ನವನಗರ ಯುನೈಟೆಡ್ ತಂಡ ೮೬ ರನ್‌ಗಳ ಗುರಿಯನ್ನು ನೀಡಿತ್ತು. ರಾಘವೇಂದ್ರ ಸರಾಫ್, ಅಜಯ ಸೂಳಿಕೇರಿ ಅವರು ಅತ್ಯುತ್ತಮ ಬ್ಯಾಟಿಂಗ್ ಮೂಲಕ ವೆಂಕಪೇಟೆ ತಂಡ ಗೆಲುವಿನ ದಡ ಸೇರಿತು.
ಸೋಮವಾರ ಸಂಜೆ ಚಾಂಪಿಯನ್ ಆಗಿ ಹೊರಹೊಮ್ಮಿದ ವೆಂಕಟಪೇಟೆ, ರನ್ನರ್‌ಅಪ್ ಆದ ನವನಗರ ಯುನೈಟೆಡ್ ತಂಡಗಳಿಗೆ ಪಂ. ಭೀಮಸೇನಾಚಾರ್ಯ ಪಾಂಡುರAಗಿ, ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ನರಸಿಂಹ ಆಲೂರ, ಉಪಾಧ್ಯಕ್ಷ ಸಂತೋಷ ಗದ್ದನಕೇರಿ, ಬ್ರಾಹ್ಮಣ ತರುಣ ಸಂಘದ ಅಧ್ಯಕ್ಷ ನಾರಾಯಣ ದೇಸಾಯಿ, ಎನ್‌ಐಸಿ ಅಧಿಕಾರಿ ಗಿರಿಯಾಚಾರ್, ವಿಪ್ರ ಕ್ರಿಕೆಟ್ ಕಪ್ ಅಧ್ಯಕ್ಷ ಕೇಶವ ಕುಲಕರ್ಣಿ, ಪತ್ರಕರ್ತ ಅಭಯ ಮನಗೂಳಿ ಅವರುಗಳು ಟ್ರೋಫಿ ಪ್ರದಾನ ಮಾಡಿದರು.
ಪಂ.ಭೀಮಸೇನಾಚಾರ್ಯ ಪಾಂಡುರAಗಿ, ನಾರಾಯಣ ದೇಸಾಯಿ ಅವರು ಮಾತನಾಡಿ, ವಿಪ್ರ ಕ್ರಿಕೆಟ್ ಕಪ್ ಆರಂಭಗೊAಡಿದ್ದೆ ಸಮಾಜದ ಸಂಘಟನೆಗಾಗಿ ಯುವಕರು ಕ್ರೀಡಾ ಮನೋಭಾವದಿಂದ ಆಡಬೇಕು. ಈ ಕ್ರಿಕೆಟ್ ಲೀಗ್ ಆರಂಭಗೊಳ್ಳುವುದರ ಹಿಂದೆ ಹಿರಿಯ ಪತ್ರಕರ್ತ ದಿ.ರಾಮ ಮನಗೂಳಿ ಅವರ ಪಾತ್ರ ದೊಡ್ಡದಾಗಿದೆ. ಅಂಥವರನ್ನು ಸ್ಮರಿಸುವ ಕಾರ್ಯವಾಗಬೇಕೆಂದು ಹೇಳಿದರು.
ವಿನಾಯಕ ದೇಸಾಯಿ, ಭರತ ಆಲೂರ, ಮಿಥುನ್ ಆಲೂರ, ಸುನೀಲ ಮಠ, ವಕೀಲರಾದ ವೆಂಕಟೇಶ ದೇಶಪಾಂಡೆ, ಶ್ರೀನಿವಾಸ ಸತ್ತಿಕರ, ಬ್ರಾಹ್ಮಣ ತರುಣ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಬಿ.ಕುಲಕರ್ಣಿ, ಅನಂತ ಮಳಗಿ, ರಾಘವೇಂದ್ರ ಕುಲಕರ್ಣಿ, ಪಾಂಡುರAಗ ಹೊಸೂರ, ಸಂಜೀವ ಗುಡಿ, ಕೃಷ್ಣಾ ಮಳಗಿ, ಅನೂಪ್ ಕುಲಕರ್ಣಿ, ಶ್ರೀಹರಿ ಡಂಬಳ, ಕಿಶೋರ ಸಿದ್ಧಾಂತಿ ಮತ್ತಿತರರು ಇದ್ದರು.