

ಕಲಬುರಗಿ: ರೋಟರಿ ಕ್ಲಬ್ ಗುಲ್ಬರ್ಗ ನಾರ್ತ್ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ಕೇರಿಂಗ್ ಫಾರ್ ಏಜಿಂಗ್ ಕಾರ್ಯಕ್ರಮದ ನಿಮಿತ್ತ ಉತ್ತರಾದಿ ಮಠ ಟ್ರಸ್ಟ್ ವೃದ್ಧಾಶ್ರಮದ ಹಿರಿಯರಿಗೆ ದಿನಬಳಕೆ ವಸ್ತುಗಳನ್ನು ವಿತರಿಸಲಾಯಿತು.
ರೋಟರಿ ೩೧೬೦ ಗವರ್ನರ್ ಮಾಣಿಕ್ ಪವಾರ್ ಮಾತನಾಡಿ, ಸಂಸ್ಕಾರದ ಕೊರತೆ, ಜಂಜಾಟದ ಉದ್ಯೋಗದಿಂದಾಗಿ ಇಂದಿನ ಯುವಕರು ತಂದೆ ತಾಯಂದಿರನ್ನು ಜೋಪಾನ ಮಾಡುತ್ತಿಲ್ಲ. ಹೀಗಾಗಿ ಹಿರಿಯರು ವೃದ್ಧಾಶ್ರಮ ಸೇರುವ ಪರಿಸ್ಥಿತಿ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಎನ್‌ವಿ ಸಂಸ್ಥೆಯ ಅಧ್ಯಕ್ಷ ಡಾ.ಗೌತಮ್ ಜಹಾಗೀರದಾರ್ ಮಾತನಾಡಿದರು. ರೋಟರಿ ಕ್ಲಬ್ ಉತ್ತರ ವಲಯದ ಅಧ್ಯಕ್ಷ ರಾಮ್ ಶಾನ್‌ಭೋಗ್ ಅಧ್ಯಕ್ಷತೆ ವಹಿಸಿದ್ದರು. ಉತ್ತರಾದಿ ಮಠ ವೃದ್ಧಾಶ್ರಮದ ಟ್ರಸ್ಟ್ ಚೇರ್ಮನ್ ಭೀಮಸೇನರಾವ್ ಮಾಡ್ಯಾಳಕರ್ ಮಾತನಾಡಿದರು. ರವಿ ಲಾತೂರಕರ್ ಇದ್ದರು. ವೀರಶೈವ ಮಹಾಸಭಾ ಆಳಂದ ಘಟಕದ ಅಧ್ಯಕ್ಷ ಶರಣು ಪಾಟೀಲ್, ರೇವಣಸಿದ್ದ ಮದ್ರಿ, ವಿಜಯಕುಮಾರ್ ಚಿಟುಗುಪ್ಕರ್, ಸಂಪತ್‌ಕುಮಾರ್ ತಪಾಡಿಯ ಅವರೂ ಕೆಲ ವಸ್ತುಗಳನ್ನು ದೇಣಿಗೆಯಾಗಿ ನೀಡಿದರು.
ರೋಟರಿ ಕ್ಲಬ್ ನಾರ್ತ್ ಅಧ್ಯಕ್ಷ ರಾಮ್ ಶಾನಭೋಗ್ ಸ್ವಾಗತಿಸಿದರು. ಸುಧಾ ಕರಲಗಿಕರ್ ವಂದಿಸಿದರು. ಕಾರ್ಯದರ್ಶಿ ನೌಶಾದ ಇರಾನಿ, ಸುಹಾಸ್ ಖಣಗೆ, ಪ್ರಶಾಂತ್ ಮಾನಕರ್, ಆನಂದ ದಂಡೋತಿ, ದಿನೇಶ್ ಪಾಟೀಲ್, ವೈಜನಾಥ ಪಾಟೀಲ್, ಪ್ರಶಾಂತ್ ಚಟುಗುಪ್ಕರ್, ದೇವೇಂದ್ರಸಿAಗ್ ಚೌಹಾಣ, ನರಸಿಂಹ ಮಳಖೇಡಕರ್, ಚಂದ್ರಶೇಖರ್ ಪಾಟೀಲ್, ಮಂಜುಕುಮಾರ್ ಇಂಡಿ, ಅಜಿತ್ ಘಾಟ್ಕೆ, ಚನ್ನವೀರ ಲಿಂಗನವಾಡಿ, ಶಿವಾನಂದ ಬೇಲೂರು, ಶರಣು ಪಪ್ಪಾ , ದ್ವಾರಕಾ ಪ್ರಸಾದ, ಶಾಮ್ ಜೋಶಿ, ಸಿ.ಕೆ. ಹಿರೇಮಠ್ ಇದ್ದರು.