ವೃದ್ದಾಪ್ಯ ಜೀವನಕ್ಕೆ ನೆಮ್ಮದಿಯ ಬದುಕು ಅವಶ್ಯ

5df14f64-7fe2-4844-bfe2-b1d7ffe07755
ಬಾಗಲಕೋಟೆ ನಗರದ ಜಮಖಾನಾ ಕ್ಲಬ್ ಆವರಣದಲ್ಲಿ ಹಿರಿಯ ನಾಗರಿಕರ ಸೇವಾ ಸಂಸ್ಥೆ ಭಾನುವಾರ ಆಯೋಜಿಸಿದ್ದ ಮಾಸಿಕ ವೈಚಾರಿಕ ಚಿಂತನಗೋಷ್ಠಿಯಲ್ಲಿ ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ಮಾತನಾಡಿದರು.
Published on

ಬಾಗಲಕೋಟೆ: ವೃದ್ದಾಪ್ಯ ಜೀವನಕ್ಕೆ ನೆಮ್ಮದಿಯ ಬದುಕು ಅವಶ್ಯವಾಗಿದ್ದು, ಅದು ಸತ್ಸಂಗದಲ್ಲಿ ಪಾಲ್ಗೊಳ್ಳುವುದು, ಪ್ರವಚನ ಆಲಿಸುವುದರಿಂದ ದೊರೆಯುತ್ತದೆ ಎಂದು ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ಹೇಳಿದರು.

ನಗರದ ಜಮಖಾನಾ ಕ್ಲಬ್ ಆವರಣದಲ್ಲಿ ಹಿರಿಯ ನಾಗರಿಕರ ಸೇವಾ ಸಂಸ್ಥೆ ಭಾನುವಾರ ಆಯೋಜಿಸಿದ್ದ ಮಾಸಿಕ ವೈಚಾರಿಕ ಚಿಂತನಗೋಷ್ಠಿಯಲ್ಲಿ ಮಾತನಾಡಿದ ಅವರು, ವೃದ್ದಾಪ್ಯ ಶಾರೀರಿಕ ಮುಪ್ಪು ಅಷ್ಟೇ, ಈ ಸಮಯದಲ್ಲಿ ಜ್ಞಾನವೃದ್ಧಿ ಸ್ಥಿತಿಯನ್ನು ತಲುಪಿ ಪ್ರಬುದ್ಧತೆಯನ್ನು ಪಡೆದು ವೃದ್ಧನಾಗಬೇಕು ಎಂದರು.

ಮುಪ್ಪಾವಸ್ಥೆಯಲ್ಲಿ ಮನುಷ್ಯ ಚಿಂತೆಗಳ ಸಂತೆಯಲ್ಲಿ ಮುಳುಗದೇ ಭಗವಂತನ ನಾಮಸ್ಮರಣೆಗಾಗಿ ಕಾಲಹರಣ ಮಾಡಬೇಕು. ಆಧ್ಯಾತ್ಮದ ಕಡೆಗೆ ಒಲುವು ಬೆಳೆಸಿಕೊಳ್ಳಬೇಕು. ಮನೋಬಲ, ಆತ್ಮಸ್ಥೆÊರ್ಯ ಬೆಳೆಸಿಕೊಂಡು ನೆಮ್ಮದಿಯ ಬದುಕನ್ನು ಕಾಣಬೇಕು ಎಂದ ಪ್ರದೀಪ ಗುರೂಜಿ, ಇಳಿ ವಯಸ್ಸಿನಲ್ಲಿ ಸಂದಿಗ್ದತೆಯ ಜೀವನದಿಂದ ಹೊರಬಂದು ನೆಮ್ಮದಿಯಿಂದ ಬದುಕುವ ಕಲೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಹಿರಿಯ ನಾಗರಿಕರ ಸೇವಾ ಸಂಸ್ಥೆಯ ಉಪಾಧ್ಯಕ್ಷ, ನಿವೃತ್ತ ಕೃಷಿ ಉಪನಿರ್ದೇಶಕ ಆರ್.ಎಲ್.ಕಟಗೇರಿ ಮಾತನಾಡಿ, ವೃದ್ದಾಪ್ಯದಲ್ಲಿ ಆಧ್ಯಾತ್ಮಿಕ ಚಿಂತನೆ ಒಂದು ದಿವ್ಯ ಔಷಽಯಾಗಿದೆ. ಚಿಂತೆ, ಕಂತೆಗಳನ್ನು ಬಿಟ್ಟು ನೆಮ್ಮದಿಯಿಂದ ಬದುಕುವುದನ್ನು ರೂಢಿಸಿಕೊಳ್ಳೊಣ ಎಂದರು.

ಹಿರಿಯ ನಾಗರಿಕರ ಸೇವಾ ಸಂಸ್ಥೆಯ ಅಧ್ಯಕ್ಷ ಮುರುಗೆಪ್ಪ ಹುಲಗಬಾಳಿ ಮಾತನಾಡಿ, ವೃದ್ದಾಪ್ಯವನ್ನು ಸಂತೋಷ ಹಾಗೂ ಸಮರ್ಪಣಾ ಭಾವದಿಂದ ಕಳೆದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಸೇವಾ ಸಂಸ್ಥೆಯ ಕಾರ್ಯದರ್ಶಿ ಎಂ.ಟಿ.ಹರಗದ ಹಾಗೂ ಖಜಾಂಚಿ ಇಂಗಳಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net