ವೀರೇದೇವನಪುರ ಕೃಷಿ ಪತ್ತಿನ ಸಹಕಾರ ಸಂಘ ಕಾಂಗ್ರೆಸ್ ತೆಕ್ಕೆಗೆ

Oplus_16908288
Oplus_16908288
Published on

ನಂಜನಗೂಡು: ತಾಲೂಕಿನ ವೀರೇದೇವನಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ವಿಜಯಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಎಸ್.ಕುಳ್ಳಯ್ಯ ಜಯಭೇರಿ ಬಾರಿಸಿದ್ದಾರೆ.

ಸಂಘದ ಆವರಣದಲ್ಲಿ ಬುಧವಾರ ಚುನಾವಣಾಧಿಕಾರಿ ರಘು ನೇತೃತ್ವದಲ್ಲಿ ಒಟ್ಟು 13 ನಿರ್ದೇಶಕರ ಬಲವಿರುವ ಸಂಘಕ್ಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಸ್ಪರ್ಧೆ ಮಾಡಿದ್ದರಿಂದ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನದಿಂದ ಸ್ಪರ್ಧಿಸಿದ್ದ ವಿಜಯಕುಮಾರ್ 7 ಮತ ಪಡೆದು ಜಯಶೀಲರಾದರು. ಪ್ರತಿಸ್ಪರ್ಧಿ ಮಹೇಶ್ 6 ಮತಗಳೊಂದಿಗೆ ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್.ಕುಳ್ಳಯ್ಯ 8 ಮತ ಪಡೆದು ಜಯಶೀಲರಾದರೆ, ಪ್ರತಿಸ್ಪರ್ಧಿ ಗುರುಸಿದ್ದಯ್ಯ 4 ಮತಗಳನ್ನು ಪಡೆದು ಪರಾಭವಗೊಂಡರು.

ನೂತನ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ನನ್ನ ಈ ಗೆಲುವಿಗೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವುದು ಪ್ರಮುಖ ಕಾರಣ. ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿದ್ದಾರೆ. ಕಳೆದ ಮೂರು ಸಾಲಿನಿಂದ ಸಂಘದ ಅಧ್ಯಕ್ಷನಾಗಿ ನಿರಂತರವಾಗಿ ಆಯ್ಕೆಯಾಗುತ್ತಿದ್ದೇನೆ. ಕಳೆದ 50 ವರ್ಷಗಳಿಂದಲೂ ಚುನಾವಣೆ ನಡೆದಿರಲಿಲ್ಲ. ಇದೇ ಮೊದಲ ಬಾರಿಗೆ ಚುನಾವಣೆ ನಡೆದಿದ್ದರೂ ನನ್ನನ್ನೇ ಅಧ್ಯಕ್ಷನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಮುಂದಿನ ಐದು ವರ್ಷಗಳ ಒಳಗೆ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದರು.

ನಿರ್ದೇಶಕರಾದ ದೊರೆಸ್ವಾಮಿ, ಬಸವೇಗೌಡ, ಕುಳ್ಳಯ್ಯ, ನಾಗರಾಜು, ರಂಗದಾಸ್, ಸ್ವಾಮಿನಾಯಕ, ದೊಡ್ಡ ಮಾದೇಗೌಡ, ಗುರುಸಿದ್ದಯ್ಯ, ಸೌಭಾಗ್ಯ, ಪಾರ್ವತಮ್ಮ, ಮಹೇಶ್, ಶಿವಲಿಂಗೇಗೌಡ, ಮುಖಂಡ ಎನ್.ಎಂ.ಮಂಜುನಾಥ್, ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net