ಕಲಬುರಗಿ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ನಿರ್ಮಿಸುತ್ತಿರುವ ವೀರಶೈವ ಲಿಂಗಾಯತ ಬಾಲಕಿಯರ ವಸತಿ ನಿಲಯಕ್ಕೆ ಶಾಸಕ ಬಿ.ಆರ್.ಪಾಟೀಲ್ ಅವರು 5 ಲಕ್ಷ ರೂ. ದೇಣಿಗೆ ಚೆಕ್ ಅನ್ನು ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷ ಶರಣಕುಮಾರ್ ಮೋದಿಯವರಿಗೆ ಸೋಮವಾರ ಹಸ್ತಾಂತರಿಸಿದರು. ಭೀಮಾಶಂಕರ ಮೇಟೇಕಾರ್, ಸೋಮಶೇಖರ ಹಿರೇಮಠ್ ಇತರರು ಇದ್ದರು.