

ಬಾಗಲಕೋಟೆ: ನಾಡಿಗೆ ವೀರಶೈವ ಲಿಂಗಾಯತ ಸಮುದಾಯದ ಕೊಡುಗೆ ಅಪಾರವಾಗಿದ್ದು,ವೀರಶೈವ ಲಿಂಗಾಯತ ಎಂದು ಹೆಮ್ಮೆಯಿಂದ ಹೇಳಿ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರು.ಬಿ.ವ್ಹಿ.ವ್ಹಿ.ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಹೇಳಿದರು.
ಶನಿವಾರ ಬಿ.ವ್ಹಿ.ವ್ಹಿ.ಸಂಘ ನೂತನ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬಾಗಲಕೋಟೆ ಜಿಲ್ಲಾ ಘಟಕದಿಂದ ೨೦೨೧-೨೨ ಹಾಗೂ ೨೦೨೨-೨೩ ನೇ ಶೈಕ್ಷಣಿಕ ವರ್ಷಗಳಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಶೇ.೯೦% ಹೆಚ್ಚು ಅಂಕ ಪಡೆದ ಬಾಗಲಕೋಟೆ ಜಿಲ್ಲೆಯ ವೀರಶೈವ-ಲಿಂಗಾಯತ ಮಕ್ಕಳಿಗಾಗಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದರು.
ವೀರಶೈವ ಲಿಂಗಾಯತ ಸಮುದಾಯದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಜಗತ್ತಿನಲ್ಲಿ ಉನ್ನತ ಸ್ಥಾನದಲ್ಲಿರುವುದಕ್ಕೆ ವೀರಶೈವ ಮಠಗಳೇ ಕಾರಣ, ರಾಜ್ಯದಲ್ಲಿ ಎಲ್ಲ ವರ್ಗದವರಿಗೂ ಶಿಕ್ಷಣ ಸಿಗಲಿ, ಯಾರು ಕೂಡಾ ಹಸಿವಿನಿಂದ ಇರಬಾರದು ಎಂಬ ಮಹಾದಾಸೆಯಿಂದ ವೀರಶೈವ ಮಠಾಧಿಶರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಜ್ಞಾನದಾಸೋಹ ಜೊತೆಗೆ ಅನ್ನದಾಸೋಹವನ್ನು ಪ್ರಾರಂಭಿಸಿದರು, ಈ ನಾಡಿಗೆ ಮಠ ಮಾನ್ಯ ಹಾಗೂ ಶಿಕ್ಷಣ ಸಂಸ್ಥೆಗಳ ಮೂಲಕ ಶೈಕ್ಷಣಿಕ ಬೆಳವಣಿಗೆಗೆ ತನ್ನದೆಯಾದ ಕೊಡುಗೆಯನ್ನು ನೀಡಿರುವುದು ವೀರಶೈವ ಸಮಾಜ, ಇದು ಸಕಲರಿಗೂ ಲೇಸನ್ನು ಬಯಸುವ ಸಮುದಾಯವಾಗಿದೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷರಾದ ಜಿ.ಎನ್.ಪಾಟೀಲ ಸಮಾಜದ ಭವಿಷ್ಯ ರೂಪಿಸುವರು ವಿದ್ಯಾಥಿಗಳು, ಅವರ ಜೋತೆಗೆ ಬೆನ್ನೆಲುಬಾಗಿ ಸಮಾಜ ಇರುತ್ತದೆ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೆ, ನಾಡಿನಲ್ಲಿ ವೀರಶೈವ ಲಿಂಗಾಯತ ಶಿಕ್ಷಣ ಸಂಸ್ಥೆಗಳು ಹೆಮ್ಮರವಾಗಿ ಬೆಳೆದಿವೆ, ಅದರಲ್ಲೂ ಬಾಗಲಕೋಟೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಸನ್ಮಾನ್ಯ ಕಾರ್ಯಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿ 28 ಇಂದ ಅಂಗಸಂಸ್ಥೆಗಳ ಇಂದು 168 ಸಂಸ್ಥೆಗಳಾಗಿದ್ದು, ಒಂದು ವಿಶ್ವವಿದ್ಯಾಲಯದಂತೆ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ, ದೇಶದಲ್ಲಿಯೇ ಹೆಸರುವಾಸಿಯಾಗಿದೆ, ಕರ್ನಾಟಕದ ಏಳಿಗೆಗೆ ವೀರಶೈವ ಲಿಂಗಾಯತ ಸಮಾಜದ ಏಳಿಗೆ ಮುಖ್ಯವಾಗುತ್ತದೆ, ಇಂದು ಎಲ್ಲ ರಂಗದಲ್ಲೂ ವೀರಶೈವ ಲಿಂಗಾಯತ ಸಮುದಾಯ ಮುಂಚೂಣಿಯಲ್ಲಿದೆ, ದಿವ್ಯಸಾನಿದ್ಯವಹಿಸಿ ಆಶೀರ್ವಚನ ನೀಡಿದ ತೆಂಗಿನಮಠದ ಮಲ್ಲಿಕಾರ್ಜುನ ದೇವರು, ಜೀವನದ ಮುನ್ನಡೆಗೆ ಶಿಕ್ಷಣ,ಸಂಸ್ಕಾರ ಅಗತ್ಯವಾಗಿದ್ದು, ಮಠಗಳು ಸಂಸ್ಕಾರವನ್ನು ನೀಡಿದರೆ, ಶಿಕ್ಷಣ ಸಂಸ್ಥೆಗಳು ಜ್ಞಾನವನ್ನು ನೀಡುತ್ತಿವೆ, ವೀರಶೈವ ಮಠಾಧೀಶರಿಂದಲೆ ಕರ್ನಾಟಕದಲ್ಲಿ ಶಿಕ್ಷಣ ಕ್ರಾಂತಿಯಾಗಿದ್ದು ಎಂದರು.
ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ ಭಗವತಿ ಪ್ರಸ್ತಾವಿಕ ಮಾತನಾಡಿದರು. ವೇದಿಕೆ ಮೇಲೆ ಬಾಗಲಕೋಟೆ ತಾಲೂಕಾಧ್ಯಕ್ಷರಾದ ಚಂದ್ರಶೇಖರ ಶೇಟ್ಟರ, ಬದಾಮಿ ತಾಲೂಕಾಧ್ಯಕ್ಷ ಸಿ.ಎಸ್.ಕಾಜೆಟ್ಟಿ, ಹುನಗುಂದ ತಾಲೂಕಾಧ್ಯಕ್ಷ ಎಂ.ಎಸ್.ಮಠ, ಜಮಖಂಡಿ ತಾಲೂಕಾಧ್ಯಕ್ಷ ಮುತ್ತಣ್ಣ ಹಿಪ್ಪರಗಿ,ಮುಧೋಳ ತಾಲೂಕಾಧ್ಯಕ್ಷ ಎಸ್.ಆರ್.ಕಾಳಗಿ,ಬೀಳಗಿ ತಾಲೂಕಾಧ್ಯಕ್ಷ ನಿಂಗಣ್ಣ ಗೋಳಿಪಲ್ಲೆ, ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಮುಕ್ಕುಪ್ಪಿ ಇದ್ದರು. ನಿರ್ಮಲಾ ಲೂತಿಮಠ,ಶಿವಲೀಲಾ ಪಟ್ಟಣಶೆಟ್ಟಿ,ವಿಜಯಲಕ್ಷ್ಮೀ ಭದ್ರಶೇಟ್ಟಿ ಪ್ರಾರ್ಥಿಸಿದರು, ಡಾ. ಗೀತಾ ದಾನಶೆಟ್ಟಿ,ಬಸವರಾಜ ತಿಪಶೇಟ್ಟಿ ಕಾರ್ಯಕ್ರಮ ನಿರೂಪಿಸಿದರು.