ವೀಣಾ ಕಾಶಪ್ಪನವರ ಸಂಕಲ್ಪ ಯಾತ್ರೆ

42ea3b6b-0e45-471e-9f94-d903917f3487
Published on

ಬಾಗಲಕೋಟೆ : ಇಂದು ಬಾಗಲಕೋಟೆ ಜಿ.ಪಂ. ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಜಿಲ್ಲೆಯ ಜನರ ಒಳಿತಿಗಾಗಿ, ಮಳೆ, ಬೆಳೆ ಸಮೃದ್ದಿಗಾಗಿ ನಗರದ ಕೊತ್ತಲೇಶ್ವರದೇವ ಸ್ಥಾನದಿಂದ ಸುಕ್ಷೇತ್ರ ತುಳಸಿಗೇರಿ ಆಂಜನೇಯದೇವ ಸ್ಥಾನದವರೆಗೆ ಸಂಕಲ್ಪ ಯಾತ್ರೆ ಆರಂಭಿಸಿದರು.

ಇದಕ್ಕೂ ಮುನ್ನ ಕೊತ್ತಲೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವರಾಶೀರ್ವಾದ ಪಡೆದರು. ಯಾತ್ರೆಗೆ ಮಠಾಧೀಶರು ಚಾಲನೆ ನೀಡಿದರು. ಯಾತ್ರೆಯು ಕೊತ್ತಲೇಶ್ವರ ದೇವಸ್ಥಾನದಿಂದ ಮಂಕಾ ಮಸೀದಿ, ಟಾಂಗಾ ನಿಲ್ದಾಣ, ಅಡತ ಬಜಾರ, ಟೀಕಿನಮಠ, ಕಾಲೇಜು ರಸ್ತೆ, ಬಸವೇಶ್ವರ ವೃತ್ತ ತಲುಪಿತು, ಬಸವೇಶ್ವರ ಪುತ್ಥಳಿಗೆ ಮಾಲಾಪರ್ಣೆ ಮಾಡಿದರು. ನಂತರ ಹೊಳೆ ಆಂಜನೇಯ ದೇವಸ್ಥಾನದ ಮೂಲಕ ಸಂಚರಿಸಿ ಮುಚಖಂಡಿ ಕ್ರಾಸ್, ವಿದ್ಯಾಗಿರಿಯಿಂದ ಗದ್ದನಕೇರಿ ಕ್ರಾಸ್ ಮೂಲಕ, ರಾಮಾ ರೂಢ ಮಠದಲ್ಲಿ ಪ್ರಸಾದ ಸ್ವೀಕರಿಸಿ ನಂತರ ತುಳಸಿಗೇರಿ ಆಂಜನೇಯ ದೇವಸ್ಥಾನಕ್ಕೆ ತಲುಪಿಲಿದೆ.

ಈ ಸಂಕಲ್ಪ ಯಾತ್ರೆಯಲ್ಲಿ ಶಾಸಕ ಎಚ್. ವೈ.ಮೇಟಿ, ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಬಾಯಕ್ಕ ಮೇಟಿ, ರಮೇಶ ಬದ್ನೂರ, ಪರಶುರಾಮ ಮಹಾರಾಜನವರ, ಚನ್ನವೀರ ಅಂಗಡಿ, ಮಂಜುನಾಥ ಪುರತಗೇರಿ ಸೇರಿದಂತೆ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net