ವಿಹಂಗಮ ಯೋಗ ಸತ್ಸಂಗ 13ರಂದು

vignan devaji maharaj
Published on

ಕಲಬುರಗಿ: ಶ್ರೀಮಾರವಾಡಿ ಮತ್ತು ಶ್ರೀಮಹೇಶ್ವರಿ ಪ್ರಗತಿ ಮಂಡಳದಿAದ ಶುಕ್ರವಾರ ಸಂಜೆ ೭ಕ್ಕೆ ನಗರದ ಪ್ರಕಾಶ ಟಾಕೀಸ್ ಹತ್ತಿರದ ಮಾಯಿ ಮಂದಿರದಲ್ಲಿ ವಿಹಂಗಮ ಯೋಗದ ಸತ್ಸಂಗ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮ ಉಪಾಧ್ಯಕ್ಷ ನಾಗಿಂದ್ರಪ್ಪ ದಂಡೋತಿಕರ್ ಹೇಳಿದರು. ಉತ್ತರ ಪ್ರದೇಶದ ಶ್ರೀ ವಿಜ್ಞಾನ ದೇವಜಿ ಮಹಾರಾಜರ ಯೋಗ ಸತ್ಸಂಗ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸದ್ಗುರು ಸದಾಫಲ ದೇವಜಿ ಮಹಾರಾಜರು ೧೭ ವರ್ಷ ಕಠಿಣ ತಪಸ್ಸು ಮಾಡಿ, ವಿದ್ಯೆ ಪಡೆದಿದ್ದು, ಅವರಿಂದ ಯೋಗ ಜ್ಞಾನ ಪಡೆದ ಶಿಷ್ಯ ಶ್ರೀ ವಿಜ್ಞಾನ ದೇವಜಿ ಮಹಾರಾಜರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆ ಕೈಗೊಂಡಿದ್ದಾರೆ. ೧೩ರಂದು ನಗರಕ್ಕೆ ಆಗಮಿಸಿ, ಸತ್ಸಂಗ ನಡೆಸಿಕೊಡಲಿದ್ದಾರೆ. ಹೆಚ್ಚಿಜ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಮನವಿ ಮಾಡಿದರು. ವಿಷ್ಣುದಾಸ ತಾಪಾಡಿಯಾ, ವೆಂಕಟೇಶ ಗಿಲ್ದಾ, ಸುಶೀಲ್ ಕವ್ದಾರ್, ಗುರುಪಾದಪ್ಪ ಹಾರಕೂಡೆ, ಶಾಮಸುಂದರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net