ವಿಶ್ವಶ್ರೇಷ್ಠ ನೇತ್ರ ತಜ್ಞ ಡಾ.ಚಂದ್ರಪ್ಪ ರೇಷ್ಮಿ ಇನ್ನಿಲ್ಲ

FB_IMG_1691852589803
Published on

ಮಾಜಿ ರಾಷ್ಟçಪತಿ, ಟಾಟಾ ಸಂಸ್ಥೆ ಸಂಸ್ಥಾಪಕರಿಗೆ ಚಿಕಿತ್ಸೆ ನೀಡಿದ್ದ ಖ್ಯಾತ ವೈದ್ಯ | ಚಿತ್ತಾಪುರದಲ್ಲಿಂದು ಅಂತ್ಯಕ್ರಿಯೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಖ್ಯಾತ ನೇತ್ರ ತಜ್ಞ, ಮಾಜಿ ರಾಷ್ಟçಪತಿ ಗ್ಯಾನಿ ಜೈಲ್‌ಸಿಂಗ್ ಸೇರಿ ಲಕ್ಷಾಂತರ ಜನರ ಬಾಳಿನಲ್ಲಿ ಬೆಳಕು ಮೂಡಿಸಿದ ಡಾ.ಚಂದ್ರಪ್ಪ ರೇಷ್ಮಿ (೯೦) ಕಲಬುರಗಿ ನಿವಾಸದಲ್ಲಿ ಶನಿವಾರ ಕೊನೆಯುಸಿರೆಳೆದಿದ್ದಾರೆ.
ಪತ್ನಿ ಕ್ಯಾತಲಿನ್, ಪುತ್ರ ಸಿಜೇಯ್, ಪುತ್ರಿ ಶಾಲಿನಿ ಸೇರಿ ಅಪಾರ ಬಳಗವನ್ನು ಅಗಲಿದ್ದಾರೆ. ಚಿತ್ತಾಪುರ ಮೂಲದ ನ್ಯೂಯಾರ್ಕ್ನ ಪೆನ್ಸಿಲ್ವೇನಿಯಾದ ಪಿಟ್ಸ್ಬರ್ಗ್ನಲ್ಲಿ ವಾಸವಾಗಿದ್ದ ಮೃತರು, ಏಳು ವರ್ಷಗಳಿಂದ ಕಲಬುರಗಿ ಜಯನಗರ ಬಡಾವಣೆ ಮನೆಯಲ್ಲಿ ನೆಲೆಸಿದ್ದರು. ವಯೋಸಹಜವಾಗಿ ನಿಧನ ಹೊಂದಿದ್ದು, ಸಂಜೆ ೫ಕ್ಕೆ ಚಿತ್ತಾಪುರ ನಿವಾಸಕ್ಕೆ ಪಾರ್ಥಿವ ಶರೀರ ತರಲಾಗಿದೆ.
ಕೃಷಿ ಮನೆತನದ ಸಿದ್ರಾಮಪ್ಪ-ವೀರಮ್ಮ ರೇಷ್ಮಿ ದಂಪತಿಯ ಎರಡನೇ ಪುತ್ರನಾಗಿದ್ದ ಚಂದ್ರಪ್ಪ ಚಿಕ್ಕ ವಯಸ್ಸಿನಿಂದಲೇ ಕಣ್ಣಿನ ಡಾಕ್ಟರ್ ಆಗಬೇಕೆಂಬ ಕನಸು ಕಂಡಿದ್ದರು. ಚಿತ್ತಾಪುರದಲ್ಲಿ ಪ್ರಾಥಮಿಕ, ಪ್ರೌಢ ಶಿP್ಷÀಣ ಮುಗಿಸಿ ಕಲಬುರಗಿಯ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಅಭ್ಯಸಿಸಿದ ಅವರು, ೧೯೬೨ರಲ್ಲಿ ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜಿನಲ್ಲಿ ಪದವಿ ಮುಗಿಸಿದರು. ನ್ಯೂಯಾರ್ಕ್ನಲ್ಲಿ ಎಂಎಸ್ ಶಿP್ಷÀಣ ಪಡೆದ ಬಳಿಕ ಪಿಟ್ಸ್ಬರ್ಗ್ನಲ್ಲಿ ರೇಷ್ಮಿ ಐ ಕೇರ್ ಸೆಂಟರ್ ಆರಂಭಿಸಿ ಸಾಕಷ್ಟು ಜನರ ದೃಷ್ಟಿದೋಷ ನಿವಾರಿಸಿದ್ದರು. ಅನೇಕ ನೇತ್ರತಜ್ಞರನ್ನು ಬೆಳೆಸಿರುವ ಇವರು, ಭಾರತವಲ್ಲದೆ ವಿಶ್ವದ ೫೬ ದೇಶಗಳ ಜನರ ನೇತ್ರ ಸಮಸ್ಯೆಗೆ ಪರಿಹಾರ ಕಲ್ಪಿಸಿದ್ದರು.
ಅಮೆರಿಕದಲ್ಲಿ ಜನ್ಮತಃ ಕುರುಡಾಗಿದ್ದ ೧೮ ವರ್ಷದ ಯುವತಿಗೆ ಯಶಸ್ವಿಯಾಗಿ ಶಸ್ತçಚಿಕಿತ್ಸೆ ಮಾಡಿ ದೃಷ್ಟಿಭಾಗ್ಯ ನೀಡಿದ್ದರು. ಬಹುತೇಕ ಕಾಲ ನ್ಯೂಯಾರ್ಕ್ನಲ್ಲೇ ಇರುತ್ತಿದ್ದ ರೇಷ್ಮಿ ಅವರು ವರ್ಷಕ್ಕೊಮ್ಮೆ ಕಲಬುರಗಿಗೆ ಆಗಮಿಸುತ್ತಿದ್ದರು. ಆ ವೇಳೆಯೂ ಸಾಕಷ್ಟು ಜನರ ನೇತ್ರ ತಪಾಸಣೆ ಮಾಡಿ ಚಿಕಿತ್ಸೆ ನೀಡಿದ್ದಾರೆ.
ಡಾ.ಚಂದ್ರಪ್ಪ ಅವರಿಗೆ ರಾಜ್ಯ ಸರ್ಕಾರ ೨೦೦೫ರಲ್ಲಿ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದಲ್ಲದೆ ಡಾ.ಪಿ.ಎಸ್.ಶಂಕರ ಪ್ರತಿಷ್ಠಾನದ ವಿದ್ಯಾಶ್ರೀ ಸೇರಿ ಸಾವಿರಾರು ಪುರಸ್ಕಾರಗಳು ಅರಸಿ ಬಂದಿವೆ.


ಅಂತಿಮ ದರ್ಶನಕ್ಕೆ ಅವಕಾಶ
ಖ್ಯಾತ ನೇತ್ರ ತಜ್ಞ ಡಾ.ಚಂದ್ರಪ್ಪ ರೇಷ್ಮಿ ಪಾರ್ಥಿವ ಶರೀರದ ದರ್ಶನಕ್ಕೆ ಚಿತ್ತಾಪುರದ ನಿವಾಸದಲ್ಲಿ ವ್ಯವಸ್ಥೆ ಮಾಡಿದ್ದು, ಶನಿವಾರ ಸಂಜೆಯಿAದ ಭಾನುವಾರ ಮಧ್ಯಾಹ್ನ ೨ರವರೆಗೆ ಜನತೆ ಅಂತಿಮ ನಮನ ಸಲ್ಲಿಸಬಹುದು. ಬಳಿಕ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.


ದೇಶದ ಗಣ್ಯರಿಗೆ ನೇತ್ರ ಚಿಕಿತ್ಸೆ
ಡಾ.ಚಂದ್ರಪ್ಪ ರೇಷ್ಮಿ ದೇಶದ ಖ್ಯಾತ ನೇತ್ರ ಶಸ್ತçಜ್ಞರಲ್ಲಿ ಒಬ್ಬರಾಗಿದ್ದರು. ಸಾಮಾನ್ಯರು ಸೇರಿ ಖ್ಯಾತನಾಮರಿಗೂ ಯಶಸ್ವಿ ನೇತ್ರ ಚಿಕಿತ್ಸೆ ನೀಡಿ ಸೈ ಎನಿಸಿಕೊಂಡಿದ್ದರು. ಉಪ ರಾಷ್ಟçಪತಿ ಗ್ಯಾನಿ ಜೈಲ್‌ಸಿಂಗ್, ಟಾಟಾ ಸಂಸ್ಥೆ ಸ್ಥಾಪಕ ಜೆಆರ್‌ಡಿ ಟಾಟಾ, ಆಂಧ್ರಪ್ರದೇಶದ ಖ್ಯಾತ ನೇತ್ರ ತಜ್ಞ ಮತ್ತು ಪದ್ಮಶ್ರೀ ಪುರಸ್ಕೃತ ಪೆರುಗು ಸಿವಾರೆಡ್ಡಿ ಸೇರಿ ಆ ರಾಜ್ಯದ ಹಲವು ಮುಖ್ಯಮಂತ್ರಿಗಳ ನೇತ್ರ ಶಸ್ತçಚಿಕಿತ್ಸೆ ಮಾಡಿದ್ದ ಹೆಗ್ಗಳಿಕೆ ಅವರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net