ವಿಶ್ವಯೋಗ ದಿನಕ್ಕೆ ಅದ್ದೂರಿ ಸಿದ್ದತೆ

5539f0f0-a3b9-4b2b-a9c1-f7ec8ca1c328
Published on

ಬಾಗಲಕೋಟೆ: ವಿಶ್ವಯೋಗಾ ದಿನವಾದ ಜೂನ್ 21 ರಂದು ಬವಿವ ಸಂಘದ ಮೂರು ಕ್ಯಾಂಪಸ್‌ಗಳಲ್ಲಿ ಹಮ್ಮಿಕೊಂಡಿರುವ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಅಧಿಕ ಜನ ಭಾಗವಹಿಸಲಿದ್ದಾರೆ ಎಂದು ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಹೇಳಿದರು.

ಅವರು ಮಂಗಳವಾರ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ನಡೆದ ವಿಶ್ವಯೋಗ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕಳೆದ 11 ವರ್ಷಗಳಿಂದ ಯೋಗ ದಿನಾಚಾರಣೆಯನ್ನು ಆಚರಿಸಲಾಗುತಿದ್ದು. ಬವಿವ ಸಂಘದ ಬಾಗಲಕೋಟೆ ನಗರದ ಹಳೆ ಕ್ಯಾಂಪಸ್‌ನಲ್ಲಿ ತಮ್ಮ ನೇತೃತ್ವದಲ್ಲೆ ಕಾರ್ಯಕ್ರಮ ನಡೆಯಲಿದ್ದು, ಎಸ್.ಎನ್.ಮೆಡಿಕಲ್ ಕಾಲೇಜು ಆವರಣದಲ್ಲಿ ವೈದ್ಯಕೀಯ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಬೇವೂರ ನೇತೃತ್ವದಲ್ಲಿ ಹಾಗೂ ವಿದ್ಯಾಗಿರಿ ಇಂಜನಿಯರಿ0ಗ್ ಕಾಲೇಜು ಆವರಣದಲ್ಲಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ನೇತೃತ್ವ ವಹಿಸಲಿದ್ದಾರೆ, ಬೆಳಿಗ್ಗೆ 6:30ಕ್ಕೆ ಕೇಂದ್ರದ ಆಯುಷ್ ಇಲಾಖೆ ಶಿಷ್ಟಾಚಾರದಂತೆ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಭಾರತದ ಹೆವ್ಮ್ಮೆಯಾಗಿರುವ ಯೋಗದಿನವನ್ನು ಯಶಸ್ವಿಗೊಳಿಸಲು ನಗರದ ಜನ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದರು, ಮೂರು ಕ್ಯಾಂಪಸ್‌ಗಳಲ್ಲಿ ನುರಿತ ಯೋಗ ಪಟುಗಳು ಯೋಗ ಮಾಡಿಸಲಿದ್ದು, ಈಗಾಗಲೇ ಅವರನ್ನು ಸಂಪರ್ಕಿಸಲಾಗಿದೆ, ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ಸAಘದ ಗೌರವ ಕಾರ್ಯದರ್ಶಿ ಮಾತನಾಡಿ ಸರ್ಕಾರದ ಶಿಷ್ಟಾಚಾರದಂತೆ 45 ನಿಮಿಷದ ಕಾರ್ಯಕ್ರಮವನ್ನು ಸಂಘಟಿಸಲಾಗುತ್ತಿದೆ, ವ್ಯಾಯಾಮದಿಂದ ದೇಹ ಬಳಲಬಹುದು ಆದರೆ ಯೋಗ ಎನ್ನುವುದು ವ್ಶೆಜ್ಞಾನಿಕ ಕ್ರಮವಾಗಿದ್ದು ಮಾನಸಿಕ ಹಾಗೂ ದೈಹಿಕ ವಿಕಸನಕ್ಕೆ ಅನುಕೂಲ ಕಲ್ಪಿಸಲಿದೆ ಎಂದು ಹೇಳಿದರು.

ಸಭೆಯಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ಗುರುಬಸವ ಸೂಳಿಬಾವಿ, ಮಲ್ಲಿಕಾರ್ಜುನ ಸಾಸನೂರ, ಮಹಾಂತೇಶ ಶೆಟ್ಟರ, ಶಿವಲಿಂಗಪ್ಪ ಮೊರಬದ, ಮಹೇಶ ಕಕರಡ್ಡಿ, ಕುಮಾರಸ್ವಾಮಿ ಹಿರೇಮಠ, ಕುಮಾರ ಜಿಗಜಿನ್ನಿ, ವಿವಿಧ ಮಹಾವಿದ್ಯಾಲಯಗಳ ಪಾಚಾರ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net