

ಬಾಗಲಕೋಟೆ: ದೇವಲೋಕವನ್ನೇ ಸೃಷ್ಠಿಸಿದ ವಿಶ್ವಕರ್ಮರು ವಿಶ್ವಕ್ಕೆ ಕರ್ಮದ ಮಹತ್ವ ತಿಳಿಸಿಕೊಟ್ಟವರು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವಕರ್ಮರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ರೈತರಿಗೆ ಉಪಯುಕ್ತ ಕೃಷಿ ಪರಿಕರಗಳನ್ನು ಮಾಡಿಕೊಡುವ ವಿಶ್ವಕರ್ಮ ಸಮಾಜಕ್ಕೆ ರೈತರಷ್ಟೇ ಪ್ರಾಮುಖ್ಯತೆ ಪಡೆದಿದೆ ಎಂದರು.
ನಿರ್ಮಾಣ ಹಂತದ ಪ್ರತಿಯೊಂದು ಕಾರ್ಯದಲ್ಲಿ ವಿಶ್ವಕರ್ಮರ ಶ್ರಮವಿದೆ. ಕ್ಲಿಷ್ಠಕರ ಅತೀಸೂಕ್ಷ್ಮವಾಗಿ ತಯಾರಿಸುವ ಬಂಗಾರ, ಬೆಳ್ಳಿ ಆಭರಣಗಳು, ಕಮ್ಮಾರಿಕೆ, ಬಡಿಗತನ, ಶಿಲ್ಪ, ವಾಸ್ತುಶಿಲ್ಪಗಳಲ್ಲದೇ ವಿವಿಧ ಕ್ಷೇತ್ರಗಳಲ್ಲು ಕೂಡಾ ವಿಶ್ವಕರ್ಮರಿಗೆ ಪ್ರಾತಿನಿದ್ಯ ಇದೆ. ಸಕಲ ಸಮಾಜದವರೊಡನೆ ಸ್ನೇಹಜೀವಿಗಳಾದ ವಿಶ್ವಕರ್ಮರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ವಿಶ್ವಕರ್ಮರಂತ ಅವತಾರಿ ಪುರುಷನ ಸಂತತಿಯಾಗಿರುವ ಸಮಾಜ ಭಾಂದವರು ವಿಶ್ವಕರ್ಮರನ್ನು ಅನುಸರಿಸಿ ಅವರನ್ನು ಗೌರವಿಸುದರ ಜೊತೆಗೆ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು.
ಹಂಪಿ ವಿಶ್ವವಿದ್ಯಾಲಯದ ಪ್ರಾದ್ಯಾಪಕ ಡಾ.ವೀರೇಶ ಬಡಿಗೇರ ಮಾತನಾಡಿ ವಿಶ್ವಕರ್ಮರನ್ನು ಪಂಚವಕ್ತೆಶ್ವರ ಎಂದು ಕರೆಯಲ್ಪಡುವ ಐದು ಮುಖ ಉಳ್ಳವನು ಎಂದರ್ಥವಿರುವ ವಿಶ್ವಕರ್ಮ ಐದು ಶಕ್ತಿಯುಳ್ಳವನು. ಜ್ಞಾನ ಉಳ್ಳವರಾಗಿದ್ದಾರೆ. ವಿಶ್ವಕರ್ಮರಿಗೆ ಋಗ್ವೇದದ ಪ್ರಕಾರ ವಿಶ್ವದ ಇಡೀ ವಾಸ್ತುಶಿಲ್ಪಗಳು ಮಹಾಭಾರತ ಪ್ರಕಾರ ಸಕಲ ಕಲೆಗಳನ್ನು ಕರಗತ ಮಾಡಿಕೊಂಡ ಕಲಾದೇವತೆ, ದೇವಾನು ದೇವತೆಗಳಿಗೆ ಸುಂದರ ಅರಮನೆ ನಿರ್ಮಿಸುವ ಕಾಯಕ ಹೊಂದಿದ್ದ ಶಕ್ತಿ ವಿಶ್ವಕರ್ಮದವರದ್ದಾಗಿದೆ.
ದೇವಾನುದೇವತೆಗಳಿಗೆ ಹಾರುವ ರಥಗಳ ವಿನ್ಯಾಸ ಮಾಡಿದಂತ, ದೇವಲೋಕದಲ್ಲಿಯೇ ಪುಜಿಸಲ್ಪಟ್ಟ ವಿಶ್ವಕರ್ಮರ ಜಯಂತಿ ಕಾರ್ಯಕ್ರಮವನ್ನಾಗಿಸಿದ ಸರಕಾರದ ಈ ಕಾರ್ಯಕ್ರಮ ಸೀಮಿತವಾಗಿರದೇ ವಿಶ್ವಕರ್ಮರ ಕಾಯಕಗಳನ್ನು ಪ್ರಚುರ ಗೊಳಿಸುವ ಯುವ ಜನಾಂಗಕ್ಕೆ ಸ್ಪೂರ್ತಿಯಾಗಲಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಮುರನಾಳ ಮಳೆಯರಾಜೇಂದ್ರ ಸ್ವಾಮಿ ಮಠದ ನಿತ್ಯಾನಂದ ಮಹಾಸ್ವಾಮಿಗಳು ಮತ್ತು ಗದ್ದನಕೇರಿ ಮಠದ ಮಳೆಪ್ಪಯ್ಯ ಸ್ವಾಮೀಜಿ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಪ್ರಾರಂಭದಲ್ಲಿ ಸ್ವಾಗತಿಸಿದರು.