ವಿಶ್ವ ಧ್ಯಾನ ದಿನಾಚರಣೆ ಸಾಧಕರಿಗೆ ಪ್ರಶಸ್ತಿ ಪ್ರದಾನ

Published on

ಹುಬ್ಬಳ್ಳಿ: ಪತಂಜಲಿ ಯೋಗ ಸಮಿತಿ ವತಿಯಿಂದ ನಗರದ ಕೇಶ್ವಾಪುರ ಪತಂಜಲಿ ರಾಜ್ಯ ಕಾರ್ಯಾಲಯದಲ್ಲಿ ಪ್ರಥಮ ವಿಶ್ವ ಧ್ಯಾನ ದಿನ ಗುರುವಾರ ಆಚರಿಸಲಾಯಿತು.

ಯೋಗ ಪೀಠದ ರಾಜ್ಯ ಪ್ರಭಾರಿ, ಅಂತಾರಾಷ್ಟ್ರೀಯ ಯೋಗಗುರು ಭವರಲಾಲ್ ಆರ್ಯ ಅವರ ಮಾರ್ಗದರ್ಶನದಲ್ಲಿ ಯೋಗ, ಧ್ಯಾನ ಮಾಡಲಾಯಿತು. ಬೆಳಗಾವಿಯ ಯೋಗ ಶಿಕ್ಷಕಿ, ವಿದ್ಯಾ ಉಪೇಂದ್ರ ಜೋಶಿ ಇವರಿಗೆ ‘ಯೋಗ ವಾರಿಯರ್ಸ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಲೇಖಕಿ, ಹವ್ಯಾಸಿ ಬರಹಗಾರ್ತಿ, ಸಾಹಿತಿ, ಸಂಗೀತಗಾರ್ತಿ, ಭಾಷಣಕಾರರೂ ಆಗಿರುವ ವಿದ್ಯಾ ಅವರು 8 ವರ್ಷದಿಂದ ಯೋಗಾಭ್ಯಾಸ ಮಾಡುತ್ತಿದ್ದು, ಕನ್ನಡ ಸರ್ಕಾರಿ ಶಾಲೆಯ ಮಕ್ಕಳು, ಸಿಬ್ಬಂದಿಗೆ ಉಚಿತ ಯೋಗಾಭ್ಯಾಸ ಮಾಡಿಸಿದ್ದಾರೆ. ಸಂಗೀತ, ಸಾಹಿತ್ಯ ಕ್ಷೇತ್ರಗಳಲ್ಲಿ 20 ವರ್ಷಗಳಿಂದ ಸಮಾಜಮುಖಿ ಸೇವೆ ಸಲ್ಲಿಸುತ್ತಿದ್ದಾರೆ. ರೇಡಿಯೋ ಮಾಧ್ಯಮದಲ್ಲೂ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.

ಪತಂಜಲಿ ಹುಬ್ಬಳ್ಳಿಯ ವಾಮನ ಶಾನಭಾಗ, ಮಹೇಶ ಕೊಟ್ಟಿಗೆರೆ, ಡಾ. ನಳಿನಿ ಮಗದುಮ್, ರಾಜಶೇಖರ ಕುದರಿ, ಮುತ್ತಪ್ಪ ನಲವಾಡಿ, ಭರಮಪ್ಪನವರ, ಉಪೇಂದ್ರ ಜೋಶಿ, ಧಾರವಾಡದ ಬಸವರಾಜ, ಶ್ರೀದೇವಿ, ವೀರೇಶ, ಅಕ್ಷಯ, ವಿಜಯ, ರೂಪಾ, ದೇವೇಂದ್ರ, ರಾಧಾಬಾಯಿ ಕುಲಕರ್ಣಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net